ಮೋರ್ನ್ಗೆ ಎಚ್ಚರಿಕೆ, ಶೇನ್ಗೆ ದಂಡ
ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆಪಾದನೆಗಾಗಿ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಮೋರ್ನ್ ಮಾರ್ಕೆಲ್ಗೆ ಎಚ್ಚರಿಕೆ ನೀಡಲಾಗಿದೆ.
ಪಂದ್ಯದ ವೇಳೆ ಅವರು ಎದುರಾಳಿ ಆಟಗಾರನನ್ನು ಅವಮಾನಗೊಳಿಸಿದ್ದು, ಇದು ನೀತಿ ಸಂಹಿತೆಯ 1ನೇ ಸ್ತರದ ಆಪಾದನೆಯಾಗಿದೆ. ಹಾಗಾಗಿ, ಅವರಿಗೆ ಎಚ್ಚರಿಕೆಯನ್ನಷ್ಟೇ ನೀಡಲಾಗಿದೆ ಎಂದು ಮ್ಯಾಚ್ ರೆಫರಿ ಹೇಳಿದ್ದಾರೆ.
ಈ ಮಧ್ಯೆ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ ಆಪಾದನೆಗಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಶೇನ್ ವ್ಯಾಟ್ಸನ್ಗೆ 20 ಸಾವಿರ ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 3 3 0 6 1.679
ಚೆನ್ನೈ ಸೂಪರ್ ಕಿಂಗ್ಸ್ 3 2 1 4 1.510
ರಾಯಲ್ ಚಾಲೆಂಜರ್ಸ್ ಬೆಂಗಳೂರು 3 2 1 4 0.736
ಕೋಲ್ಕತಾ ನೈಟ್ ರೈಡರ್ಸ್ 3 2 1 4 0.639
ರಾಜಸ್ಥಾನ ರಾಯಲ್ಸ್ 3 1 2 2 -0.229
ಸನ್ರೈಸರ್ಸ್ ಹೈದರಾಬಾದ್ 3 1 2 2 -1.238
ಡೆಲ್ಲಿ ಡೇರ್ಡೆವಿಲ್ಸ್ 4 1 3 2 -1.533
ಮುಂಬೈ ಇಂಡಿಯನ್ಸ್ 2 0 2 0 -1.515