ಕೋಲ್ಕತಾದ ಸ್ಲಂನಲ್ಲಿ ಬೆಳೆದ ರಂಜಿಬ್ ರಾಯ್ ಫುಟ್ಬಾಲ್ ಅಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾನೆ. ಮ್ಯಾಂಚೆಸ್ಟರ್ ಯುನೈಟೆಡ್ನ ಓಲ್ಡ್ ಟ್ರಾಫೋರ್ಡ್ನಲ್ಲಿ 2 ವಾರಗಳ ಅಭ್ಯಾಸ ನಡೆಸಲಿದ್ದಾನೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರ್ಶಾಲಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ರೆಡ್ ಡೆವಿಲ್ಸ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿ ವಿದೇಶದಲ್ಲಿ ಅಭ್ಯಸಿಸುವ ಅವಕಾಶ ಪಡಕೊಂಡ. ತಾಯಿ ಹಾಗೂ ತಮ್ಮನೊಂದಿಗೆ ಗುಡಿಸಿನಲ್ಲಿ ವಾಸವಿರುವ ರಂಜಿಬ್ ಕೋಲ್ಕತಾದ ರೆಡ್ಲೈಟ್ ರಸ್ತೆಗಳ ಮಧ್ಯ ಬೆಳೆದವನು. ಎರಡು ವರ್ಷದ ಹಿಂದೆ ರಂಜಿಬ್ನನ್ನು ಆತನ ತಾಯಿ ಸ್ಥಳೀಯ ಶಾಲೆಯೊಂದಕ್ಕೆ ಸೇರಿಸಿದರು. ನಂತರ ಶಾಲಾ ತಂಡದಲ್ಲಿ ಫುಟ್ಬಾಲ್ ಆಡಲು ಪ್ರಾರಂಭಿಸಿದ.