ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್: ಅಧಿಬನ್‌ಗೆ ಬೆಳ್ಳಿ ಪದಕ

Vishwanath S
Updated On : 27 Apr 2014, 1:01 am

ಶಾರ್ಜಾ: ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಬಿ. ಅಧಿಬನ್ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಅವರು ಮುಂದಿನ ವರ್ಷ ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ.
ಶನಿವಾರ ನಡೆದ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಅಧಿಬನ್ ಅವರು ಚೀನಾದ ಯೂ ಯಾಂಗೈ ವಿರುದ್ಧ ಡ್ರಾ ಸಾಧಿಸಿದರು. ಆ ಮೂಲಕ ಒಟ್ಟು 6.5 ಅಂಕಗಳ ಗಳಿಕೆಯೊಂದಿಗೆ ಎರಡನೇ ಸ್ಥಾನದ ಗೌರವ ಪಡೆದರು.
ಈ ಮಧ್ಯೆ ವಿಶ್ವ ಜೂನಿಯರ್ ಚಾಂಪಿಯನ್ ಯೂ ಯಾಂಗೈ ಚಿನ್ನದ ಪದಕ ಗೆದ್ದುಕೊಂಡರೆ, ಚೀನಾದ ನೀ ಹುವಾ ಮೂರನೇ ಸ್ಥಾನಗಳಿಸಿ ಕಂಚಿನ ಪದಕಕ್ಕೆ ಅರ್ಹರಾದರು. ವಿಶ್ವದ ಮಾಜಿ ಚಾಂಪಿಯನ್ ರುಸ್ತಂ ಕಾಸಿಮ್‌ಝನೋವಾ ನಾಲ್ಕನೇ ಸ್ಥಾನ ಪಡೆದರು.  ಭಾರತದ ಇತರೆ ಆಟಗಾರರ ಪೈಕಿ  ಎಸ್.ಪಿ. ಸೇತುರಾಮನ್ ಮತ್ತು ಪರಿಮ್‌ರಾಜನ್ ನೇಗಿ ಕ್ರಮವಾಗಿ 9 ಮತ್ತು 10ನೇ ಸ್ಥಾನಗಳಿಗೆ ತೃಪ್ತಿ ಹೊಂದಿದರು.  ಮಹಿಳೆಯರ ವಿಭಾಗದಲ್ಲಿ ಇಂಡೊನೇಶಿಯಾದ ಐರಿನ್ ಖರೀಷ್ಮಾ ಸುಕಂದರ್ ಚಿನ್ನದ ಪದಕಕ್ಕೆ ಭಾಜನರಾದರು. ಮಾಜಿ ಚಾಂಪಿಯನ್ ಇರಾನ್‌ನ ಅಟೊಸಾ ಪೌರಕಾಶಿಯನ್ ಬೆಳ್ಳಿ ಮತ್ತು ಚೀನಾದ ಟಾನ್ ಝೋಂಗೈ ಕಂಚಿನ ಪದಕ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement