ತಾತಂಡ ಕಪ್ ಕೌಟುಂಬಿಕ ಹಾಕಿ: ಹನ್ನೆರಡು ತಂಡಗಳಿಗೆ ಮುನ್ನಡೆ
ವಿರಾಜಪೇಟೆ: ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ ಪಂದ್ಯದ 7ನೇ ದಿನ ಶನಿವಾರ 12 ತಂಡಗಳು ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದವು.
ಶನಿವಾರ ನಡೆದ ಪಂದ್ಯಗಳಲ್ಲಿ ಅಮ್ಮಣ್ಣಿ ತಂಡವು 0-6, ಅಲ್ಲಾರಂಡ 2-3, ಬಿದ್ದಂಡ ತಂಡವು 6-1, ತಿತಿಮಾಡ ತಂಡವು 4-0, ಮಣುವಟ್ಟೀರ ತಂಡವು 1-0 ಅಂತರದಿಂದ ಜಯಗಳಿಸಿದರೆ ಮುಕ್ಕಾಟೀರ (ಮಾದಾಪುರ) ತಂಡವು ವಾಕ್ ಓವರ್ ಮೂಲಕ ಮತ್ತು ಮಲ್ಲಜೀರ ತಂಡವು ಆಫ್ ಟೈಮ್ನಲ್ಲಿ ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿದವು. 2ನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕುಂಚೇಟ್ಟಿರ ತಂಡವು 3-1, ಶಿವಚಾಳಿಯಂಡವು 2-0, ಕೊಟ್ಟಂಗಡ ತಂಡವು 4- 3, ನಾಮೇರ ತಂಡವು 3- 2, ಮುಕ್ಕಾಟೀರ 3- 0 ಅಂತರದಿಂದ ಜಯಗಳಿಸಿದವು.
1ನೇ ಮೈದಾನ: ಅಮ್ಮಣ್ಣಿ ತಂಡ ಮತ್ತು ಅರಮನಮಾಡ ತಂಡದ ನಡುವಿನ ಹಾಕಿ ಪಂದ್ಯದಲ್ಲಿ ಅರಮನಮಾಡ ತಂಡ 0- 6 ಅಂತರದಿಂದ ಸೋಲೊಪ್ಪಿಕೊಂಡಿತು. ಉತ್ತಮ ಪ್ರದರ್ಶನ ನೀಡಿದ ಪುದಿಯೊಕ್ಕಡ ಮತ್ತು ಅಲ್ಲಾರಂಡ ತಂಡದ ನಡುವಿನ ಸೆಣಸಾಟದಲ್ಲಿ ಪುದಿಯೊಕ್ಕಡ ತಂಡವು ಅಲ್ಲಾರಂಡ ತಂಡಕ್ಕೆ 2-3ರ ಅಂತರದಿಂದ ಶರಣಾಯಿತು.
ಬಿದ್ದಂಡ ಮತ್ತು ಮಳೆಯಂಡ ತಂಡದ ನಡುವಿನ ಸೆಣಸಾಟದಲ್ಲಿ ಬಿದ್ದಂಡ ತಂಡವು ಮಳೆಯಂಡ ತಂಡವನ್ನು 6-1 ಅಂತರದಿಂದ ಸೋಲಿಸಿ ಜಯ ತನ್ನದಾಗಿಸಿಕೊಂಡಿತು.
ತಿತಿಮಾಡ (ಕುಂದ) ಮತ್ತು ನಂಬುರಮಾಡ ನಡುವಿನ ಸೆಣಸಾಟದಲ್ಲಿ ತಿತಿಮಾಡ ತಂಡವು 4-0 ಅಂತರದಿಂದ ವಿಜಯಿಯಾಯಿತು.
ಮಣುವಟ್ಟೀರ ಮತ್ತು ಅಪ್ಪಾರಂಡ ತಂಡದ ಪಂದ್ಯದಲ್ಲಿ ಮಣುವಟ್ಟೀರ ತಂಡವು 1-0 ಗೋಲಿನಿಂದ ಜಯ ತನ್ನದಾಗಿಸಿಕೊಂಡಿದ್ದು,
2ನೇ ಮೈದಾನ: ಇನ್ನೊಂದು ಮೈದಾನದಲ್ಲಿ ಮಾಪಂಡ ಮಾಡ ಮತ್ತು ಕುಂಚೇಟ್ಟಿರ ನಡುವಿನ ಹಾಕಿ ಪಂದ್ಯದಲ್ಲಿ ಕುಂಚೇಟ್ಟಿರ ತಂಡವು 3-1 ಗೋಲಿನಿಂದ ಜಯ ತನ್ನದಾಗಿಸಿಕೊಂಡಿತು.
ನೆಲ್ಲೀರ ಮತ್ತು ಶಿವಚಾಳಿಯಂಡ ತಂಡದ ನಡುವಿನ ಸೆಣಸಾಟದಲ್ಲಿ ಶಿವಚಾಳಿಯಂಡವು 2- 0 ಗೋಲಿನಿಂದ ಮುನ್ನಡೆ ಸಾಧಿಸಿದವು. ಭರ್ಜರಿ ಪ್ರದರ್ಶನ ನೀಡಿದ ಐತಿತಂಡ ಮತ್ತು ಕೊಟ್ಟೆಂಗಡ ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡದ ಎದುರು ಐತಿ ತಂಡವು 4-3 ಅಂತರದಿಂದ ಸೋಲೊಪ್ಪಿಕೊಂಡಿತು.
ಬೊಳ್ಳೆಚೆಟ್ಟೀರ ಮತ್ತು ನಾಮೇರ ನಡುವಿನ ಪಂದ್ಯದಲ್ಲಿ ನಾಮೇರ ತಂಡವು ಬೊಳ್ಳೆಚೆಟ್ಟೀರ ತಂಡವನ್ನು 3-2 ಅಂತರದಿಂದ ಸೋಲಿಸಿ, ಜಯ ದಾಖಲಿಸಿತು.
ಮುಕ್ಕಾಟೀರ (ಬೊಂದ) ಮತ್ತು ಪರಂಗಡ ನಡುವಿನ ಸೆಣಸಾಟದಲ್ಲಿ ಮುಕ್ಕಾಟೀರ 3-0 ಅಂತರದಿಂದ ಜಯಗಳಿಸಿದ್ದು, ಮುಕ್ಕಾಟೀರ ತಂಡವು ಆಟದ ಪ್ರಾರಂಭದಿಂದ ಕೊನೆವರೆಗೆ ಪರಂಗಡ ತಂಡಕ್ಕೆ ಯಾವುದೇ ಪ್ರತಿರೋಧ ತೋರಲು ಬಿಡದೆ ಜಯ ತನ್ನದಾಗಿಸಿಕೊಂಡಿತು.