ಚೆನ್ನೈಗೆ 146ರ ಲಕ್ಷ್ಯ
ಶಾರ್ಜಾ: ಸೂಪರ್ ಕಿಂಗ್ಸ್ ಸೂಪರ್ ದಾಳಿಗೆ ನಲುಗಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಭಾನುವಾರ ನಡೆದ ಐಪಿಎಲ್‌ನ 2ನೇ ಪಂದ್ಯದಲ್ಲಿ ಚೆನ್ನೈಗೆ 146 ರನ್‌ಗಳ ಪೈಪೋಟಿ ಮೊತ್ತದ ಗುರಿ ನೀಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 145 ರನ್ ಕಲೆ ಹಾಕಿತು.
ಆರಂಭಿಕ ಆಟಗಾರ ಆರೋನ್ ಫಿಂಚ್ (44) ತಾಳ್ಮೆಯ ಬ್ಯಾಟಿಂಗ್ ಮತ್ತು ಕೆಳ ಕ್ರಮಾಂಕದಲ್ಲಿ ಡಾರೆನ್ ಸಾಮಿ (ಅಜೇಯ 23) ಬ್ಯಾಟ್‌ನೊಂದಿಗೆ ಗುಡುಗಿದ್ದು ಹೈದರಾಬಾದ್ ತಂಡ, 140 ರನ್‌ಗಳ ಗಡಿ ದಾಟಲು ನೆರವಾಯಿತು. 15 ಎಸೆತಗಳನ್ನು ಎದುರಿಸಿದ ಸಾಮಿ ಮೊತ್ತದಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು. ಅವರಿಗೆ ತಕ್ಕ ಸಾಥ್ ನೀಡಿದ ಕರಣ್ ಶರ್ಮಾ 7 ಎಸೆತಗಳನ್ನು 17 ರನ್ ಕಲೆ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ (25) ನಿಧಾನವಾಗಿ ಕ್ರೀಸ್‌ಗೆ ಕಚ್ಚಿಕೊಳ್ಳುತ್ತಿದ್ದಂತೆಯೇ ಈಶ್ವರ ಪಾಂಡೆ ಎಸೆತದಲ್ಲಿ ಡ್ವೈನ್ ಸ್ಮಿತ್‌ಗೆ ಕ್ಯಾಚ್ ನೀಡಿದರು. ಇನ್ನು ನಾಯಕ ಶಿಖರ್ ಧವನ್ (7) ಬೇಗನೆ ಪೆವಿಲಿಯನ್ ಸೇರುವ ಮೂಲಕ ಮತ್ತೊಮ್ಮೆ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವೈಫಲ್ಯ ಕಂಡರು.
ಚೆನ್ನೈ ಪರ ಆಕರ್ಷಕ ಬೌಲಿಂಗ್ ಮಾಡಿದ ಬೆನ್ ಹಿಲ್ಫೆನಾಸ್ ಮತ್ತು ಮೋಹಿತ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರೆ, ಡ್ವೈನ್ ಸ್ಮಿತ್ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 145
ಆರೋನ್ ಫಿಂಚ್ ಬಿ ಶರ್ಮಾ 44 (45), ಶಿಖರ್ ಧವನ್ ಸಿ ಮನ್ಹಾಸ್ ಬಿ ಹಿಲ್ಫೆನಾಸ್ 7 (9), ಡೇವಿಡ್ ವಾರ್ನರ್ ಎಲ್‌ಬಿ ಹಿಲ್ಫೆನಾಸ್ 0 (2), ಕೆ.ಎಲ್ ರಾಹುಲ್ ಸಿ ಈಶ್ವರ ಬಿ ಸ್ಮಿತ್ 25 (27), ವೇಣುಗೋಪಾಲ್ ರಾವ್ ಸಿ ಸ್ಮಿತ್ ಬಿ ಶರ್ಮಾ 13 (15), ಡಾರೆನ್ ಸಾಮಿ ಅಜೇಯ 23 (15), ಕರಣ್ ಶರ್ಮಾ ಅಜೇಯ 17 (7)
ಇತರೆ: (ಬೈಸ್-5, ಎಲ್‌ಬಿ-8, ವೈಡ್-3) 16
ವಿಕೆಟ್ ಪತನ: 1-15, 2-15, 3-67, 4-98, 5-109
ಬೌಲಿಂಗ್ ವಿವರ: ಹಿಲ್ಫೆನಾಸ್ 4-0-32-2, ಈಶ್ವರ ಪಾಂಡೆ 3-0-22-0 ಮೋಹಿತ್ ಶರ್ಮಾ 4-0-27-2, ಆರ್. ಅಶ್ವಿನ್ 4-0-17-0, ರವೀಂದ್ರ ಜಡೇಜಾ 3-0-23-0, ಡ್ವೈನ್ ಸ್ಮಿತ್ 2-0-11-1