ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭೂಪತಿಯಿಂದ ಲಂಡನ್ ಒಲಿಂಪಿಕ್ಸ್ ದುಃಖಕರವಾಯ್ತು : ಪೇಸ್ ವಿಷಾದ

ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆದ ಖ್ಯಾತ ಹಿರಿಯ ಟೆನಿಸ್ ಆಟಗಾರ ಲಿಯಾಂಡ್ ಪೇಸ್ ಅವರು...

Mainashree
Updated On : 27 Apr 2014, 10:27 am

ನವದೆಹಲಿ: ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆದ ಖ್ಯಾತ ಹಿರಿಯ ಟೆನಿಸ್ ಆಟಗಾರ ಲಿಯಾಂಡ್ ಪೇಸ್ ಅವರು ಅತೀವ ಆನಂದ ಅನುಭವಿಸಿರಬಹುದು. ಆದರೆ, 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ತಂಡ ಆಯ್ಕೆ ಮಾಡಿದ ಬಗ್ಗೆ ಅಷ್ಟೇ ಅತೀವ ಬೇಸರವನ್ನು ಅವರು ಹೊಂದಿದ್ದಾರೆ. ಅಲ್ಲದೆ, ಕ್ರೀಡಾಕೂಟ ತಮ್ಮ ಪಾಲಿಗೆ ದುಃಖದಾಯಕವಾಗಿದ್ದಕ್ಕೆ ಮಹೇಶ್ ಭೂಪತಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಂಡವನ್ನು ನೇಮಕ ಮಾಡುವಾಗ ಬಂಡೆದ್ದಿದ್ದ ಪ್ರಮುಖ ಆಟಗಾರರು, ಲಿಯಾಂಡರ್ ಪೇಸ್ ಜತೆ ಆಡಲು ತಿರಸ್ಕರಿಸಿದ್ದರು. ಪ್ರಮುಖವಾಗಿ ಆಡಬೇಕಿದ್ದ ರೋಹನ್ ಬೋಪಣ್ಣ ಅವರು ಪೇಸ್ ಆಡಲು ನಿರಾಕರಿಸಿದ್ದರು.
ಲಂಡನ್  ಒಲಿಂಪಿಕ್ಸ್ ನನಗೆ ದುಃಖದಾಯಕವಾಗಲು ಮಹೇಶ್ ಭೂಪತಿ ಅವರೇ ನೇರ ಹೊಣೆ. ಅವರು ಪದಕ ಗೆಲ್ಲುವುದರಿಂದ ಮಾತ್ರ ನನ್ನನ್ನು ತಪ್ಪಿಸಲಿಲ್ಲ. ಪದಕ ಗೆಲ್ಲುವ ದೇಶದ ಅವಕಾಶವೊಂದನ್ನೇ ಅವರು ತಪ್ಪಿಸಿದರು. ಇತಿಹಾಸದಲ್ಲಿ ದೇಶಕ್ಕೆ ಅದೊಂದು ಕಪ್ಪು ಚುಕ್ಕಿ'ಎಂದು ಪೇಸ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಭವಿಷ್ಯದಲ್ಲಿ ನೀವು ಮಾಜಿ ಜತೆಯಾಟಗಾರ ಭೂಪತಿಯೊಂದಿಗೆ ಜತೆಯಾಗಿ ಆಡುತ್ತೀರಾ ಎಂದು ಕೇಳಿದ್ದಕ್ಕೆ, ಪೇಸ್ ಬಾಯಿಂದ ಬಂದ ಗಡಸಾದ ಧ್ವನಿ ಇಲ್ಲ
 ಎಂದು.ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಲಿಯಾಂಡರ್ ಪೇಸ್ ಅವರೊಂದಿಗೆ ಜತೆಯಾಗಿ ಆಡಲು ನಿರಾಕರಿಸಿದ ಪೇಸ್ ಮತ್ತು ಬೋಪಣ್ಣ ಜೋಡಿ, ತಾವು ಜತೆಯಾಗಿ ಕಣಕ್ಕಿಳಿದಿದ್ದರು. ಆದರೆ, ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಪೇಸ್ ಕಣಕ್ಕಿಳಿದಿದ್ದರು.1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಪೇಸ್ ಅವರೊಂದಿಗೆ, ಪುರುಷರ ಡಬಲ್ಸ್‌ನಲ್ಲಿ ವಿಷ್ಣುವರ್ಧನ್ ಅವರನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಕಣಕ್ಕಿಳಿಸಿತ್ತು.ಇಂತಹ ಒಂದು ಘಟನೆ 2016ರಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲು ಪೇಸ್ ಅವರಿಗೆ ಮತ್ತೊಂದು ಕಾರಣವಾಯಿತು ಎಂದು ಹೇಳುವುದು 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ, ನಾನು 7ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಾಧನೆ ಮಾಡಿದಂತಾಗುತ್ತದೆ. ಅಲ್ಲದೆ, ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಇನ್ನು ಕೇವಲ ಎರಡು ವರ್ಷ ದೂರವಿದ್ದು, ಅಭ್ಯಾಸ ಮಾಡಲಿಕ್ಕೆ ಸಮಯವಿದೆ. ಅಲ್ಲದೆ, ಪುರುಷರ ಡಬಲ್ಸ್ ವಿಭಾಗದ ರ್ಯಾಂಕಿಂಗ್‌ನಲ್ಲಿ ನಾನು ಟಾಪ್ 10 ಪಟ್ಟಿಯಲ್ಲಿದ್ದೇನೆ. ಉತ್ತಮವಾಗಿ ಆಡುವುದು ಮತ್ತು ದೀರ್ಘ ಕಾಲದ ವೈಭವವನ್ನು ತಂದುಕೊಡುವುದು ನನ್ನ ಗುರಿಯಾಗಿದೆ ಎಂದು ರಿಯೋ ಒಲಿಂಪಿಕ್ಸ್‌ನಲ್ಲಿ 42 ವರ್ಷದವರಾಗಿ ಭಾಗವಹಿಸಲಿರುವ ಪೇಸ್ ತಿಳಿಸಿದರು.
ಅಲ್ಲದೆ, ಒಂದು ವೇಳೆ ಎಐಟಿಎ ಅವಕಾಶ ನೀಡಿದರೆ, ಸರ್ಬಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಆಡಲು ನಾನು ಸಿದ್ಧವಿದ್ದೇನೆ ಎಂದಿದ್ದಾರೆ
ದೇಶದ ಪರವಾಗಿ ಆಡಲು ನಾನು ಸದಾ ಸಿದ್ಧನಿದ್ದೇನೆ. ನನ್ನ ಅಗತ್ಯ ಬಿದ್ದು, ಸರ್ಬಿಯಾ ವಿರುದ್ಧ ಆಡಲು ನನಗೆ ಆಡಲು ಅವಕಾಶ ನೀಡಿದರೆ, ನನ್ನ ಶ್ರೇಷ್ಠ ಪ್ರದರ್ಶನವನ್ನು ನಾನು ನೀಡುತ್ತೇನೆ ಎಂದು ಪೇಸ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement