ಮೂರೇ ರನ್‌ಗಳಿಗೆ ಆಲೌಟ್... ನಂಬ್ತೀರಾ?
ಲಂಡನ್: ಕ್ರೀಡೆಯಲ್ಲೇ ಕ್ರಿಕೆಟ್ ಒಂದು ವಿಭಿನ್ನ ಕ್ರೀಡೆ. ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ದಾಖಲಾದಗಲೂ ಅಲ್ಲೊಂದು ಅಚ್ಚರಿ ಕಾದಿರುತ್ತದೆ. ಅತಿ ಕಡಿಮೆ ರನ್ ದಾಖಲಾದಗಲೂ ಅಲ್ಲೊಂದು ನಿರಾಸೆಯ ದಾಖಲೆಯಾಗಿರುತ್ತದೆ.
ಆದರೆ, ಕ್ರಿಕೆಟ್ ಮಹತ್ವದ ಪಂದ್ಯಾವಳಿಗಳಾದ ವಿಶ್ವಕಪ್ ಮತ್ತು ಆ್ಯಶಸ್‌ನಲ್ಲಿ ದಾಖಲಾಗದ ಅಚ್ಚರಿಯ ಕಡಿಮೆ ಸ್ಕೋರ್ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ತಂಡಗಳಾಡಿದ ಪಂದ್ಯದಲ್ಲಿ ದಾಖಲಾಗಿದೆ.
ವಾಯವ್ಯ ಇಂಗ್ಲೆಂಡ್‌ನ ವೈರಲ್ ಕ್ರಿಕೆಟ್ ಕ್ಲಬ್ ಈ ದಾಖಲೆ ಬರೆದಿದೆ. ಭಾನುವಾರ ಹಾಸ್ಲಿಂಗ್ಟನ್ ವಿರುದ್ಧ ಚೇಶೈರ್ ಲೀಗ್‌ನ ಮೂರನೇ ಡಿವಿಷನ್ ಪಂದ್ಯದಲ್ಲಿ ವಾಯವ್ಯ ಇಂಗ್ಲೆಂಡ್ ಕೇವಲ 3 ರನ್‌ಗಳಿಗೆ ಆಲೌಟ್ ಆಗಿದೆ. 3 ರನ್‌ಗಳಲ್ಲಿ ಎರಡು ಲೆಗ್ ಬೈಸ್‌ನಿಂದಲೇ ಬಂದದ್ದಾಗಿದೆ.
ಇನಿಂಗ್ಸ್‌ನಲ್ಲಿ ಹತ್ತು ಬ್ಯಾಟ್ಸ್‌ಮನ್‌ಗಳು ಡಕೌಟ್ ಆಗಿದ್ದು ಈ ಪಂದ್ಯದ ಮತ್ತೊಂದು ದಾಖಲೆಯಾಗಿದೆ. 11ನೇ ಕ್ರಮಾಂಕದಲ್ಲಿ ಬಂದ ಕೊನ್ನಾರ್ ಹೂಡ್ಸನ್ ಅವರು ಮಾತ್ರ ತಂಡದ ಪರ ಏಕೈಕ ರನ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
ಹೀಗಾಗಿ, ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 108 ರನ್ ಗಳಿಸಿದ್ದ ಹಾಸ್ಲಿಂಗ್ಟನ್, 105 ರನ್‌ಗಳ ಅಂತರದಿಂದ ಜಯ ಕಂಡುಕೊಂಡಿತು.
ಒಟ್ಟು ಬ್ಯಾಟ್ಸ್‌ಮನ್‌ಗಳು 11
ಎದುರಿಸಿದ ಎಸೆತ 56
ಗಳಿಸಿದ ರನ್ 3
ಶ್ರೇಷ್ಠ ಸ್ಕೋರ್ (ಹಾಡ್ಸನ್) 1
ಸೊನ್ನೆ ಗಳಿಸಿದವರು 10
ಬೌಲ್ಡ್ ಆಗಿದ್ದು 6
ಎಲ್‌ಬಿಯಾಗಿದ್ದು 2
ಕ್ಯಾಚೌಟ್ 2