ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆರ್‌ಸಿಬಿ ತಂಡಕ್ಕೆ ರಾಸ್ಸೋ ಸೇರ್ಪಡೆ

Mainashree
Updated On : 28 Apr 2014, 10:49 am

ದುಬೈ: ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಯುವ ಬ್ಯಾಟ್ಸ್‌ಮನ್ ರೀಲೀ ರಾಸ್ಸೋ ಅವರು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದಾರೆ.
ರಾಸ್ಸೋ ಅವರು ಗಾಯದ ಪಟ್ಟಿ ಸೇರಿರುವ ರಿಕ್ ಮ್ಯಾಡಿನ್ಸನ್ ಅವರ ಸ್ಥಾನ ತುಂಬಲಿದ್ದಾರೆ ಎಂದು ಐಪಿಎಲ್ ತಾಂತ್ರಿಕ ಸಮಿತಿ ತಿಳಿಸಿದೆ.
ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಮ್ಯಾಡಿನ್ಸನ್ ಬೆಂಗಳೂರು ತಂಡದ ಪರ ಮೊದಲೆರಡು ಪಂದ್ಯಗಳಲ್ಲಿ ಆಡಿ ಕ್ರಮವಾಗಿ 4 ಮತ್ತು 12 ರನ್‌ಗಳಿಸಿದ್ದರು. ಆದರೆ, ನಂತರದಲ್ಲಿ ಅವರು ಗಾಯಗೊಂಡು ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಆಡುವುದು ಅಸಾಧ್ಯವಾದ ಕಾರಣ ಬದಲಿ ಆಯ್ಕೆಗಾಗಿ ತಾಂತ್ರಿಕ ಸಮಿತಿಯು ಆರ್‌ಸಿಬಿಗೆ ಅನುಮತಿ ನೀಡಿತ್ತು.
2010ರಿಂದ ದಕ್ಷಿಣ ಆಫ್ರಿಕಾ 'ಎ' ತಂಡದ ಕಾಯಂ ಸದಸ್ಯರಾಗಿರುವ 24ರ ರೀಲೀ ರಾಸ್ಸೋ ದೇಶೀಯ ಟೂರ್ನಿಗಳಲ್ಲಿ ಭಾರಿ ರನ್‌ಗಳನ್ನು ಸಂಪಾದಿಸಿದ್ದಾರೆ.

ಬೆಂಗಳೂರಿಗೆ ಡೇವಿಸ್ ಕಪ್ ವಿಶ್ವ ಗುಂಪಿನ ಆತಿಥ್ಯದ ಭಾಗ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement