'ಗಂಭೀರ್ ಸ್ಥಾನ ಭದ್ರ'
ಅಬುಧಾಬಿ: ಸತತ ವೈಫಲ್ಯದಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಸ್ಥಾನ ಭದ್ರವಾಗಿದೆ ಎಂದು ಕೆಕೆಆರ್ ತಂಡದ ಸಹಾಯಕ ಕೋಚ್ ವಿಜಯ್ ದಹಿಯಾ ತಿಳಿಸಿದ್ದಾರೆ.
'ಗೌತಮ್ ಗಂಭೀರ್ ಈ ಪಂದ್ಯಾವಳಿಯಲ್ಲಿ ಮತ್ತೆ ತಮ್ಮ ಫಾರ್ಮ್ ಕಂಡುಕೊಳ್ಳುವ ವಿಶ್ವಾಸ ಹೊಂದಿದ್ದರಾದರೆ. ಆದರೆ, ಗಂಭೀರ್ ರನ್ ಬರವನ್ನು ಎದುರಿಸುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ' ಎಂದು ತಂಡದಲ್ಲಿರುವ ಆತಂಕವನ್ನು ವಿಜಯ್ ಒಪ್ಪಿಕೊಂಡಿದ್ದಾರೆ.