'ಸೆಹ್ವಾಗ್ ನನಗೆ ನೆರವಾದರು'
ದುಬೈ: ಉತ್ತಮ ಕ್ರಿಕೆಟರ್ ಆಗಿ ರೂಪುಗೊಳ್ಳಲು ನನಗೆ ಸೆಹ್ವಾಗ್ ಅವರು ನೆರವು ನೀಡಿದರು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ ಸಂದೀಪ್ ಶರ್ಮಾ ತಿಳಿಸಿದ್ದಾರೆ. 'ವೀರೆಂದ್ರ ಸೆಹವಾಗ್ ಅವರು ಅತ್ಯುತ್ತಮ ವ್ಯಕ್ತಿ. ನಾವು ನೆಟ್ಸ್‌ನಲ್ಲಿ ಕಲ್ಪನಾ ರೀತಿಯಲ್ಲಿ ಫೀಲ್ಡಿಂಗ್ ಬಗ್ಗೆ ಬ್ಯಾಟ್ಸ್‌ಮನ್‌ಗಳಿಗೆ ತಿಳಿಸಿ ನಂತರ ಅವರಿಗೆ ಬೌಲಿಂಗ್ ಮಾಡುತ್ತೇವೆ. ಈ ರೀತಿ ಮಾಡುವಾಗ ನಾನು ಯಾವುದೇ ರೀತಿಯ ತಪ್ಪು ಮಾಡಿದರೆ ಅಥವಾ ನಾನು ಹೇಳಿದ ಕ್ಷೇತ್ರ ರಕ್ಷಣೆಗೆ ತಕ್ಕಂತೆ ಬೌಲಿಂಗ್ ಮಾಡದಿದ್ದರೆ ಸೆಹವಾಗ್ ನನ್ನ ಬಳಿ ಬಂದು ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ ನಾನು ಎಲ್ಲಿ ತಪ್ಪು ಮಾಡಿದೆ, ಯಾವರೀತಿ ಬೌಲ್ ಮಾಡಬೇಕು ಎಂಬುದನ್ನು ತಿಳಿಸುತ್ತಾರೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಪಂದ್ಯದಲ್ಲಿ ನಾನು ಪ್ರಮುಖ ಪಾತ್ರವಹಿಸಲು ನೆರವಾಯಿತು' ಎಂದು ಸಂದೀಪ್ ಶರ್ಮಾ ತಿಳಿಸಿದ್ದಾರೆ. 'ಸೆಹವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದು, ಅದೇ ತಂಡದಲ್ಲಿ ಆಡುತ್ತಿರುವುದು ನನ್ನ ಅದೃಷ್ಟ. ಚಿಕ್ಕವನಿದ್ದಾಗಿನಿಂದ ವೀರೂ ನನ್ನ ನೆಚ್ಚಿನ ಬ್ಯಾಟ್ಸ್‌ಮನ್. ಅವರೊಂದಿಗೆ ಕಲಿಯುತ್ತಿರುವುದು ಸಂತಸ ತಂದಿದೆ' ಎಂದಿದ್ದಾರೆ.