ಸ್ವಿಂಗ್ ನನ್ನ ಅಸ್ತ್ರ: ಭುವನೇಶ್ವರ್
ನವದೆಹಲಿ: ವೇಗ ನನ್ನ ಶಕ್ತಿ ಅಲ್ಲ.ಹಾಗಾಗಿ ಸ್ವಿಂಗ್ ಅನ್ನು ಅಸ್ತ್ರವಾಗಿ ಬಳಸುತ್ತೇನೆ ಎಂದು ವಿಶ್ವದ ಶ್ರೇಷ್ಠ ವೇಗದ ಬೌಲರ್ ಡೇಲ್ ಸ್ಟೇಯ್ನ್ ಹಾಗೂ ಇಶಾಂತ್ ಶರ್ಮಾ ಅವರೊಂದಿಗೆ ಸನ್ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.
ಪಂದ್ಯದಲ್ಲಿ ವಿಕೆಟ್ ಪಡೆಯಲು ನಾನು ಸ್ವಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದ್ದೇನೆ. ಅದನ್ನು ಮುಂದುವರಿಸುತ್ತೇನೆ. ಅಲ್ಲದೇ ಬೇರೆಯವರನ್ನು ನೋಡಿ ನಾನು ನನ್ನ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಭುವನೇಶ್ವರ್ ತಿಳಿಸಿದ್ದಾರೆ.
ಇನ್ನು ಸ್ಟೇಯ್ನ್ ಜತೆಗೆ ಆಡುವಾಗ ತಮ್ಮ ಬೌಲಿಂಗ್ನಲ್ಲೂ ವೇಗ ಹೆಚ್ಚಿಸಕೊಳ್ಳಬೇಕು ಎಂದನಿಸುತ್ತದೇಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಭುವಿ, 'ಇಲ್ಲ, ಆ ರೀತಿಯಾಗಿ ಚಿಂತಿಸಿಲ್ಲ' ಎಂದರು.
ಪಿಚ್ನ ಮತ್ತೊಂದು ತುದಿಯಲ್ಲಿನ ನನ್ನ ಜತೆಗಾರ ವೇಗವಾಗಿ ಬೌಲಿಂಗ್ ಮಾಡುತ್ತಾನೊ ಇಲ್ಲವೊ, ಅಥವಾ ಆತನ ಶೈಲಿಯ ಬಗ್ಗೆ ಯೋಚಿಸುವುದಿಲ್ಲ. ನಾನು ಕೇವಲ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಲು ಗಮನ ಹರಿಸುತ್ತೇನೆ ಎಂದರು.