ಹಾಕಿ: ವನಿತೆಯರಿಗೆ ಎರಡನೇ ಸೋಲು
ಗ್ಲಾಸ್ಗೋ: ಸಮರ್ಥ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡ ಭಾರತ ವನಿತೆಯರ ಹಾಕಿ ತಂಡ, ಗ್ಲಾಸ್ಗೋ ರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಚಾಲೆಂಜ್ 1 ಪಂದ್ಯಾವಳಿಯಲ್ಲಿ 2ನೇ ಸೋಲನುಭವಿಸಿದೆ.
ಮಂಗಳವಾರ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಏಕೈಕ ಗೋಲು ದಾಖಲಿಸುವಲ್ಲಿ ವೈಫಲ್ಯ ಕಂಡ ವನಿತೆಯರ ತಂಡ, 4-0 ಅಂತರದಿಂದ ಪರಾಭವ ಹೊಂದಿತು. ಇದಕ್ಕೂ ಮುನ್ನ ಎ ಗುಂಪಿನ ಆರಂಭಿಕ ಪಂದ್ಯದಲ್ಲಿ ಭಾರತ, ಕೊರಿಯಾ ವಿರುದ್ಧ ಪರಾಭವ ಹೊಂದಿತ್ತು.