ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಫ್ರಿಕಾ ಕ್ರೀಡೆಯಲ್ಲಿ ವಣಭೇದ ಜೀವಂತ

Mainashree
Updated On : 30 Apr 2014, 10:45 am

ಜೊಹಾನ್ನೆಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಾಗೂ ರಗ್ಬಿ ಕ್ರೀಡೆಗಳಲ್ಲಿ ಕರಿಯರು ಹಾಗೂ ಬಿಳಿಯರಿಗೆ ಶೇ.50ರಷ್ಟು ಸಮಾನ ಅವಕಾಶ ನೀಡಬೇಕು ಎಂದಬ ನಿರ್ಣಯಕ್ಕೆ ಬಂದು 20 ವರ್ಷ ಕಳೆದರೂ, ದಕ್ಷಿಣ ಆಫ್ರಿಕಾದಲ್ಲಿನ ಕ್ರೀಡೆ ಜನಾಂಗೀಯವಾಗಿ ಇಬ್ಬಾಗವಾಗಿದೆ ಎಂದು ಸರ್ಕಾರದ ಅಧ್ಯಯನದಿಂದ ತಿಳಿದು ಬಂದಿದೆ.
ಬಿಳಿಯರು ಹೆಚ್ಚು ಪ್ರಾಬಲ್ಯ ಸಾಧಿಸಿದ್ದ ಕ್ರಿಕೆಟ್ ಹಾಗೂ ರಗ್ಬಿ ಕ್ರೀಡೆಗಳಲ್ಲಿ ಹೆಚ್ಚಿನ ಕರಿಯರನ್ನು ಸೇರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ತೆಗೆದುಕೊಂಡ ನಂತರವೂ ಈ ರೀತಿಯಾದ ಭಿನ್ನ ನಿಲುವು ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಇದಕ್ಕೆ ತದ್ವಿರುದ್ಧವಾಗಿ 2010ರಲ್ಲಿ ಫೀಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದರೂ, ಈ ಕ್ರೀಡೆಯಲ್ಲಿ ಬಿಳಿಯರ ಸಂಖ್ಯೆ ತೀರಾ ವಿರಳವಾಗಿದೆ.
ಕಳೆದ ಎರಡು ದಶಕಗಳಿಂದ ಕ್ರೀಡೆಯಲ್ಲಿ ಎರಡೂ ವರ್ಣಗಳ ಜನರಲ್ಲಿ ಸಮಾನತೆ ಮೂಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಾದರೂ, ಆ ಎಲ್ಲಾ ಯೋಜನೆಗಳು ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ದಕ್ಷಿಣ ಆಫ್ರಿಕಾದ ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ, ಕ್ರಿಕೆಟ್‌ನಲ್ಲಿ ಸಾಕಷ್ಟು ಕರಿಯರು ಕಾಣಿಸಿಕೊಂಡಿದ್ದರಾದರೂ, ಶೇ.50ರಷ್ಟು ಪ್ರಮಾಣವನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿನ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಾತ್ರ ಬಿಳಿಯರಿದ್ದರೂ, ಕ್ರಿಕೆಟ್ ಹಾಗೂ ರಗ್ಬಿ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಭುತ್ವ ಸಾಧಿಸಿದ್ದಾರೆ.
ಈಗಿನ ವ್ಯವಸ್ಥೆಯಲ್ಲೂ ತಂಡವನ್ನು ಆಯ್ಕೆ ಮಾಡುವ ಆಯ್ಕೆಗಾರರು ಜನಾಂಗೀಯ ವಾದಿಗಳಾಗಿದ್ದಾರೆ. ಅವರು ಪ್ರತಿಭಾನ್ವಿತ ಕರಿಯ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ಕ್ರೀಡಾ ಸಚಿವಾಲಯದ ಮಹಾ ನಿರ್ದೇಶಕ ಅಲೆಕ್ ಮೊಯೆಮಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement