ಪಂದ್ಯದ ಗತಿ ಬದಲಿಸಿದ ಫಾಕ್ನರ್: ಸ್ಮಿತ್
ಅಬುಧಾಬಿ: ಕೋಲ್ಕತಾ ನೈಟ್‌ರೈಡರ್ಸ್ ತಂಡದ ವಿರುದ್ಧ ರೋಚಕ ಸೂಪರ್ ಓವರ್‌ನಲ್ಲಿ ಗೆಲವು ದಾಖಲಿಸಿದ ತಂಡ ರಾಜಸ್ಥಾನ ರಾಯಲ್ಸ್ ತಂಡ ಗೆಲವಿನ ಸಂಭ್ರಮದಲ್ಲಿದ್ದು, ನೈಟ್‌ರೈಡರ್ಸ್ ಇನಿಂಗ್ಸ್‌ನ 19ನೇ ಓವರ್ ಮಾಡಿದ ಫಾಕ್ನರ್ ಪಂದ್ಯದ ಗತಿಯನ್ನು ಬದಲಿಸಿದರು ಎಂದು ಸ್ಟೀವನ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
152ರನ್‌ಗಳ ಮೊತ್ತವನ್ನು ರಕ್ಷಿಸಿಕೊಳ್ಳಲು ಮುಂದಾದ ರಾಜಸ್ಥಾನ ರಾಯಲ್ಸ್‌ಗೆ ಜೇಮ್ಸ್ ಫಾಕ್ನರ್ 11 ರನ್‌ಗಳಿಗೆ 3 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ಓಟಕ್ಕೆ ಬ್ರೇಕ್ ಹಾಕಿದರು.
ಕೆಕೆಆರ್ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಫಾಕ್ನರ್, 3 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ನಿಯಂತ್ರಣವನ್ನು ರಾಜಸ್ಥಾನಕ್ಕೆ ತಂದುಕೊಟ್ಟರು. ಈ ಓವರ್‌ನಲ್ಲಿ ಫಾಕ್ನರ್ ಸೂರ್ಯಕುಮಾರ್ ಯಾದವ್ (31), ರಾಬಿನ್ ಉತ್ತಪ್ಪ (0) ಮತ್ತು ವಿನಯ್ ಕುಮಾರ್ (0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹಾಗಾಗಿ ಈ ಓವರ್ ಪಂದ್ಯದ ದಿಕ್ಕನ್ನುಬದಲಿಸಿತು ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಕೆಕೆಆರ್ ಇನಿಂಗ್ಸ್‌ನ 18ನೇ ಓವರ್‌ವರೆಗೂ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಕೆಕೆಆರ್ ತಂಡ ಮೇಲುಗೈ ಸಾಧಿಸಿತ್ತು. ಫಾಕ್ನರ್ ಓವರ್ ನಂತರ ಪಂದ್ಯದ ನಿಯಂತ್ರಣ ರಾಜಸ್ಥಾನದ ಪಾಲಾಯಿತು ಎಂದು ಸ್ಮಿತ್ ತಿಳಿಸಿದ್ದಾರೆ.
ಒಂದೇ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡಿದ್ದು, ಕ್ರೀಸ್‌ಗೆ ಆಗಮಿಸಿದ ಹೊಸ ಬ್ಯಾಟ್ಸ್‌ಮನ್ ಮೇಲೆ ಒತ್ತಡವನ್ನು ಹೆಚ್ಚಿಸಿತು. ಆ ಪರಿಸ್ಥಿತಿಯಲ್ಲಿ ಒತ್ತಡವನ್ನು ನಿಭಾಯಿಸಿಕೊಂಡು ಆ ಪ್ರದರ್ಶನ ನೀಡಿದ ಫಾಕ್ನರ್‌ಗೆ ಗೆಲವಿನ ಶ್ರೇಯ ಸಲ್ಲಬೇಕು ಎಂದರು.
ಫಾಕ್ನರ್ ಅವರ ಈ ಪ್ರದರ್ಶನ ಭಾರತದಲ್ಲೂ ಮುಂದುಪವರಿದು ನಾವು ಮತ್ತಷ್ಟು ಪಂದ್ಯಗಳನ್ನು ಗೆದ್ದುಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ್ದ ಕೆಕೆಆರ್ ಸಹ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 152 ರನ್ ದಾಖಲಿಸಿತು. ನಂತರ ಪಂದ್ಯ ಟೈ ಆದ ಹಿನ್ನಲೆಯಲ್ಲಿ ಸೂಪರ್ ಓವರ್ ನಡೆಸಲಾಯಿತು. ಇದರಲ್ಲಿ ಕೆಕೆಆರ್ ತಂಡ 2 ವಿಕೆಟ್‌ಗೆ 11 ರನ್ ದಾಖಲಿಸಿದರೆ, ರಾಜಸ್ಥಾನ ತಂಡ ವಿಕೆಟ್ ನಷ್ಟವಿಲ್ಲದೇ 11 ರನ್ ದಾಖಲಿಸಿ ಮತ್ತೆ ಟೈ ಆಯಿತು. ಆದರೆ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದರಿಂದ ಪಂದ್ಯದಲ್ಲಿ ಗೆಲವು ದಾಖಲಿಸಿತು.