ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೇ.8ರಿಂದ ಫಿಡೆ ಚೆಸ್

Mainashree
Updated On : 30 Apr 2014, 10:43 am

ಮುಂಬೈ: ಬಹು ನಿರೀಕ್ಷಿತ ಐಸಿಎಸ್ ಅಂತಾರಾಷ್ಟ್ರೀಯ ಫಿಡೆ ರೇಂಟಿಂಗ್ ಚೆಸ್ ಪಂದ್ಯಾವಳಿವಳಿಯನ್ನು ಮೇ 8ರಿಂದ 16ರವರೆಗೆ ಮುಂಬೈನಲ್ಲಿ ಆಯೋಜಿಸಲಾಗುತ್ತಿದೆ.
ಈ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಅಗ್ರ ಮಾಸ್ಟರ್ಸ್‌ಗಳು ಭಾಗವಹಿಸುವ ಸಾಧ್ಯತೆಗಳಿವೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯನ್ನು ಠಾಕೂರ್ ವೈಜ್ಞಾನಿಕ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದ್ದು, ಈ ಪಂದ್ಯಾವಳಿಯ ಪ್ರಶಸ್ತಿ ಮೊತ್ತ 3 ಲಕ್ಷ ನೀಡಲಾಗುವುದು.
ಈ ಪಂದ್ಯಾವಳಿಯಲ್ಲಿ ಕೇವಲ ಫಿಡೆ ರ್ಯಾಂಕಿಂಗ್ ಆಟಗಾರರಿಗೆ ಮಾತ್ರ ಅವಕಾಶವಿದೆ. ಇಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಒಂಬತ್ತು ಸುತ್ತಿನ ಕ್ಲಾಸಿಕ್ ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಇಂಡಿಯನ್ ಚೆಸ್ ಸ್ಕೂಲ್ ಫೌಂಡರ್ ಹಾಗೂ ಫಿಡೆನ ಮಾರ್ಗದರ್ಶಕರಾಗಿರುವ ಪ್ರಫುಲ್ ಜವೇರಿ ಅವರು ತಿಳಿಸಿದ್ದಾರೆ.
ಇಲ್ಲಿ ಪಂದ್ಯದಲ್ಲಿನ ಮೊದಲ 40 ಚಲನೆಗಳಿಗೆ 120 ನಿಮಿಷ, ನಂತರದ 20 ಚಲನೆಗಳಿಗೆ 60 ನಿಮಿಷ ಹಾಗೂ ಉಳಿದ ಪಂದ್ಯಕ್ಕೆ 15 ನಿಮಿಷ. ಹಾಗೂ ಪ್ರತಿ ಚಲನೆಗೆ 30 ಸೆ. ಹೆಚ್ಚಿನ ಕಾಲಾವಧಿ ನೀಡಲಾಗುವುದು.
ಈ ಪಂದ್ಯಾವಳಿಯಲ್ಲಿ ಹಲವು ಅಂತಾರಾಷ್ಟ್ರೀಯ ಮಾಸ್ಟರ್‌ಗಳು ಆಗಮಿಸುವ ನಿರೀಕ್ಷೆ ಇದೆ. ಈ ಪಂದ್ಯಾವಳಿಯಲ್ಲಿ ಅದಿತಿ ಉದೇಶಿ, ಸಮೀತ್ ಕಟ್‌ಮಾಲೆ, ವಿಕ್ರಮಾಧಿತ್ಯ ಕಾಂಬ್ಳೆ ಮತ್ತು ಎ ಠಾಕೂರ್ ಅವರಿಂದ ಪ್ರವೇಶ ಪಡೆದಿದ್ದೇವೆ ಎಂದು ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಗೆಲವು ಸಾಧಿಸುವ ಆಟಗಾರ 70 ಸಾವಿರ, ರನ್ನರ್ ಅಪ್ 50 ಸಾವಿರ ಬಹುಮಾನ ನೀಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement