ಸ್ಟೇರ್ಲಿಂಗ್‌ಗೆ ಆಜೀವ ನಿಷೇಧ
ನ್ಯೂಯಾರ್ಕ್: ಜನಾಂಗೀಯ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕದ ಲಾಸ್ ಏಂಜಿಲೀಸ್ ಕ್ಲಿಪ್ಪರ್ಸ್ ಬಾಸ್ಕೆಟ್ ಬಾಲ್ ತಂಡದ ಮಾಲೀಕ ಡೂನಾಲ್ಡ್ ಸ್ಟೇರ್ಲಿಂಗ್ ಅವರಿಗೆ ಎನ್‌ಬಿಎ ಕಮಿಶನರ್ ಆ್ಯಡಂ ಸಿಲ್ವರ್ ನಿಷೇಧ ಹೇರಿದ್ದಾರೆ. ಇದರೊಂದಿಗೆ, ಸ್ಟೇಲಿಂಗ್‌ಗೆ ದಂಡವನ್ನೂ ವಿಧಿಸಲಾಗಿದೆ.
'ಸ್ಟೇಲಿಂಗ್ ಅವರನ್ನು ತೆಗೆದು ಹಾಕಲು, ಅಮೆರಿಕ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಸ್ಥೆ (ಎನ್‌ಬಿಎ) ಇತರ ಮಾಲೀಕರಿಂದ ನನಗೆ ಸಂಪೂರ್ಣ ಬೆಂಬಲವನ್ನು ನಿರೀಕ್ಷಿಸುತ್ತೇನೆ' ಎಂದು ಹೇಳಿದ್ದರು. ಆದರೆ, ಸಿಲ್ವರ್ ಅವರ ತೀರ್ಮಾನವನ್ನು ಇತರ ಮಾಲೀಕರು ತಕ್ಷಣವೇ ಬೆಂಬಲಿಸಿದ್ದಾರೆ.
ಆದರೆ, ಲೀಗ್‌ನ ಅತ್ಯಂತ ದೀರ್ಘ ಕಾಲದ ಮತ್ತು ಅಂದಾಜು 2 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮಾಲೀಕರಾಗಿರುವ ಸ್ಟೇರ್ಲಿಂಗ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿಲ್ಲ.