ಕ್ರೀಡೆ

ಜುಮ್ಮೆನ್ನುವ ಗೆಳತಿಯೇ ಜಿಮ್ಮು!

ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ದಲ್ಲಿ 15 ವರ್ಷಗಳ ವೈಭವದ ವೃತ್ತಿಜೀವನ ಕಳೆದವನು ಆತ. ಹತ್ತು ವರ್ಷ ತಂಡದ ನಾಯಕತ್ವ ವಹಿಸಿಕೊಂಡಿದ್ದಾನೆ. ಅಲ್ಲದೆ, ನಾಯಕತ್ವದ ಅವಧಿಯಲ್ಲಿ ಬಾರ್ಸಿಲೋನಾಕ್ಕೆ 21 ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾನೆ. ಆತ ಮತ್ತ್ಯಾರೂ ಅಲ್ಲ, ಕಾರ್ಲಸ್ ಪಿಯೋಲ್!
36ನೇ ವಯಸ್ಸಿನಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿದ್ದರಿಂದ ಫುಟ್ಬಾಲ್ ವೃತ್ತಿಗೆ ನಿವೃತ್ತಿ ಹೇಳದ ಮನುಷ್ಯ. ಆದರೆ, ವೃತ್ತಿ ಜೀವನದ ನಂತರ ಫಿಟ್ನೆಸ್ ಉಳಿಸಿಕೊಳ್ಳುವುದು ಮಾತ್ರ ಆತನಿಗೆ ಸಮಸ್ಯೆಯಾಯಿತು. ಅದಕ್ಕೆ ಆತ ಕಂಡುಕೊಂಡ ದಾರಿ ತುಂಬಾ ರೋಚಕ.
ಜಿಮ್‌ಗಾಗಲಿ, ಫುಟ್ಬಾಲ್ ಮೈದಾನಕ್ಕೆ ಮರಳಿ ವ್ಯಾಯಾಮ ಮಾಡುವ ಗೋಜಿಗಾಗಲಿ ಆತ ಹೋಗಲಿಲ್ಲ. ಬದಲಾಗಿ ಆತ ಕಂಡ ಸುಲಭ ಉಪಾಯ ತನ್ನ ಗೆಳತಿಯನ್ನೇ ಫಿಟ್ನೆಸ್ ಸಾಧನಾಗಿ ಬಳಸಿಕೊಂಡಿದ್ದು! ವೆನೆಸ್ಸಾ ಲಾರೆಂಜೋ ಅವರನ್ನೇ ಫಿಟ್ನೆಸ್ ಸಾಧನವಾಗಿಸಿಕೊಂಡ ಪಿಯೋಲ್ ತಮ್ಮ ಅಂಗಸೌಷ್ಟವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಪಿಯೋಲ್ ತಮ್ಮ ಗೆಳತಿಯೊಂದಿಗೆ ಹೀಗೆಲ್ಲ ವ್ಯಾಯಾಮ ಮಾಡುತ್ತಿರುವುದು, ಭವಿಷ್ಯದಲ್ಲಿ ವೇಟ್‌ಲಿಫ್ಟಿಂಗ್‌ಗೆ ಸೇರಲೆಂದೇ ಎಂದು ಅವರ ಗೆಳೆಯರು ಗುಮಾನಿ ವ್ಯಕ್ತಪಡಿಸಿದ್ದಾರಂತೆ!


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಸಕ್ತ ಸಾಲಿನ ಅಂತಿಮ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ

Pariksha Pe Charcha 2026: ಅಗ್ಗದಲ್ಲಿ ಡೇಟಾ ಸಿಗುತ್ತದೆ ಎಂದು ಇಂಟರ್ನೆಟ್ ಲ್ಲಿ ಸಮಯ ಕಳೆಯಬೇಡಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆಗಳೇನು?-Video

ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ Rajpal Yadav ತಿಹಾರ್ ಜೈಲಿಗೆ ಶರಣು!

'ಮೊದಲು ಇರಾನ್ ತೊರೆಯಿರಿ': ಡೊನಾಲ್ಡ್ ಟ್ರಂಪ್ ದಾಳಿ ಎಚ್ಚರಿಕೆ ಬೆನ್ನಲ್ಲೇ ಅಮೆರಿಕನ್ನರಿಗೆ ವೈಟ್ ಹೌಸ್ ಕೊನೆಯ ಎಚ್ಚರಿಕೆ!

T20 World Cup 2026: 'ನಮಗೋಸ್ಕರ ಭಾರತ ವಿರುದ್ಧ ಆಡಿ': ಆರ್ಥಿಕ ಸಂಕಷ್ಟದಲ್ಲಿರುವ 'ಆತಿಥೇಯ' ಶ್ರೀಲಂಕಾ ಪಾಕಿಸ್ತಾನಕ್ಕೆ ಮನವಿ

SCROLL FOR NEXT