ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತವರಿಗೆ ಬಂದಿಳಿದ ಚಿನ್ನದ ರಾಣಿಯರು

ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್ ವಿಭಾಗದಲ್ಲಿ ದೇಶಕ್ಕೆ ಮೊದಲ...

Rashmi Kasaragodu
Updated On : 6 Aug 2014, 1:44 am

ಚೆನ್ನೈ: ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ, ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನ್ನಪ್ಪ ಅವರನ್ನ್ನು ಮಂಗಳವಾರ ಚೆನ್ನೈನಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಚಿನ್ನದ ಪದಕ ಗೆದ್ದುಕೊಂಡಿತ್ತು.
ಪಳ್ಳಿಕಲ್ ಮತ್ತು ಚಿನ್ನಪ್ಪ ಅವರೊಂದಿಗೆ, ಕೋಚ್ ಮೇಜರ್ ಎಸ್ ಮಣಿಯಮ್ ಹಾಗೂ ತಂಡದ ಇತರ ಸದಸ್ಯರಾದ ಅನಕಾ ಅಲಂಕಾಮೋನಿ ಮತ್ತು ಹರಿಂದರ್ ಸಿಂಗ್ ಸಂಧು ಅವರು ಇದ್ದರು.
ತಂಡದ ಇತರ ಆಟಗಾರರಾದ ಸೌರವ್ ಘೋಸಾಲ್, ಮಹೇಶ್ ಮಂಗಾವ್ಕರ್ ಹಾಗೂ ಕೋಚ್ ಭುವನೇಶ್ವರಿ ಕುಮಾರಿ ಅವರು ಕ್ರಮವಾಗಿ ಕೋಲ್ಕತಾ, ಮುಂಬೈ ಹಾಗೂ ನವದೆಹಲಿಗೆ ತೆರಳಿದರು.
ಭಾರತೀಯ ಸ್ಕ್ವಾಷ್ ಅಕಾಡೆಮಿ (ಐಎಸ್ಎ) ಕೋಚ್ಗಳು, ರಾಷ್ಟ್ರೀಯ ಕೋಚ್ ಸಿರಸ್ ಪೂಂಚಾ ಅವರ ನಾಯಕತ್ವದಲ್ಲಿ ಹುವಿನ ಹಾರ ಹಿಡಿದುಕೊಂಡು, ಸಂಸ್ಥೆಯ ಇತರ ಸದಸ್ಯರೊಂದಿಗೆ ಆಟಗಾರರನ್ನು ಸ್ವಾಗತಿಸಲು ಆಗಮಿಸಿದ್ದರು. ಆಟಗಾರರ ಪಾಲಕರು ಮತ್ತು ಸ್ಕ್ವಾಷ್ ಅಭಿಮಾನಿಗಳೂ ಆಟಗಾರರ ಆಗಮನಕ್ಕಾಗಿ ಕಾಯ್ದು ಕುಳಿತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement