ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೆಂಗಳೂರು ವಾತಾವರಣ ಭಾರತಕ್ಕೆ ಅನುಕೂಲ

ಸರ್ಬಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಡೇವಿಸ್ ಕಪ್ ಪಂದ್ಯದ ವೇಳೆ ಬೆಂಗಳೂರಿನ...

Rashmi Kasaragodu
Updated On : 6 Aug 2014, 12:42 pm

ಬೆಂಗಳೂರು: ಸರ್ಬಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಡೇವಿಸ್ ಕಪ್ ಪಂದ್ಯದ ವೇಳೆ ಬೆಂಗಳೂರಿನ ವಾತಾವರಣ ಭಾರತ ತಂಡದ ಆಟಗಾರರಿಗೆ ಲಾಭದಾಯಕವಾಗಲಿದೆ ಎಂದು ತವರಿನ ಮಾಜಿ ಟೆನಿಸ್ ದಂತಕತೆ ವಿಜಯ್ ಅಮೃತ್ರಾಜ್ ಅಭಿಪ್ರಾಯಪಟ್ಟಿದ್ದಾರೆ.
16 ರಾಷ್ಟ್ರಗಳ ವಿಶ್ವ ಗುಂಪಿಗೆ ಪ್ರವೇಶಿಸಲು ಸರ್ಬಿಯಾ ವಿರುದ್ಧ ಆಡಲಾಗುವ ಅರ್ಹತಾ ಹಂತದ ಪ್ಲೇಆಫ್ ಸಮರ ಬೆಂಗಳೂರಿನಲ್ಲಿ ಬರುವ ಸೆಪ್ಟೆಂಬರ್ 12ರಿಂದ 14ರ ವರೆಗೆ ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೃತ್ರಾಜ್, ಹುಲ್ಲಿನಂಕಣದ ಮೇಲೆ ಆಡದಿದ್ದರೂ, ಬೆಂಗಳೂರು ವಾತಾವರಣ ಉತ್ತಮವಾಗಿದ್ದು, ನಮ್ಮ ಆಟಗಾರರಿಗೆ ನೆರವಾಗಲಿದೆ. ಈ ಅಖಾಡದಲ್ಲಿ ಸೋಮ್ದೇವ್ ದೇವವರ್ಮನ್, ಯುಕಿ ಭಾಂಬ್ರಿ ಹಾಗೂ ರೋಹನ್ ಬೋಪಣ್ಣ ಇಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಮೇಲಾಗಿ ಸರ್ಬಿಯಾ ತಂಡದಲ್ಲಿ ನೋವಾಕ್ ಜೋಕ್ವಿಚ್, ಜಾಂಕೊ ತಿಪ್ಸರ್ವಿಚ್ ಸೇರಿದಂತೆ ಕೆಲ ಪ್ರಮುಖರು ಹೊರಗುಳಿಯುತ್ತಿರುವುದು ಭಾರತಕ್ಕೆ ಲಾಭವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement