ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಚಾಂಪಿಯನ್ಶಿಪ್ ಶೂಟಿಂಗ್ಗೆ ಪುಷ್ಪಾಂಜಲಿ

Rashmi Kasaragodu
Updated On : 6 Aug 2014, 12:40 pm

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗಾಗಿ ಭಾರತ ಶೂಟಿಂಗ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅನ್ನುರಾಜ್ ಸ್ಥಾನದಲ್ಲಿ ಪಿಸ್ತೂಲ್ ಶೂಟರ್ ಪುಷ್ಪಾಂಜಲಿ ರಾಣಾಗೆ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ಎಐ) ಮಂಗಳವಾರ ಇಲ್ಲಿ ಸಭೆ ಸೇರಿ ಈ ಬದಲಾವಣೆಯ ನಿರ್ಧಾರ ಕೈಗೊಂಡಿತು.  ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ ಬಿಂದ್ರಾ ನೇತೃತ್ವದ ವಿಶ್ವ ಚಾಂಪಿಯನ್ಶಿಪ್ ಶೂಟಿಂಗ್ ತಂಡದಲ್ಲಿ ವಿಜಯ್ ಕುಮಾರ್, ಗಗನ್ ನಾರಂಗ್, ಮಾನವ್ಜೀತ್ ಸಿಂಗ್ ಸಂಧು, ಅನಿಶಾ ಸಯೀದ್, ರಾಹಿ ಸರ್ನೋಬತ್, ಹೀನಾ ಸಿಧು, ಹರ್ಪ್ರೀತ್ ಸಿಂಗ್ ಮತ್ತು ಸಂಜೀವ್ ರಾಜಪೂತ್ ಅವರಂತಹ ಪ್ರತಿಭಾನ್ವಿತರು ಭಾರತ ಪ್ರತಿನಿಧಿಸಲಿದ್ದಾರೆ. ವಿಶ್ವ ಚಾಂಪಿಯನ್ಶಿಪ್ ಸ್ಪೇನ್ನ ಗ್ರೆನಡಾದಲಿ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement