ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ
ದುಬೈ: ಬಿಸಿಸಿಐಗೆ ಮತ್ತೊಂದು ಹಿನ್ನೆಡೆ ಉಂಟಾಗಿದೆ. ಕಾರಣ, ನ್ಯಾಯಾಂಗ ಆಯುಕ್ತರು ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಬಿಸಿಸಿಐ ಮಾಡಿಕೊಂಡಿದ್ದ ಮನವಿಯನ್ನು ಐಸಿಸಿ ಬುಧವಾರ ತಿರಸ್ಕರಿಸಿದೆ.ಭಾರತ ತಂಡದ ಆಟಗಾರ ರವೀಂದ್ರ ಜಡೇಜಾ ಅವರನ್ನು ಮೊದಲ ಟೆಸ್ಟ್ ಪಂದ್ಯದ ಸಂದರ್ಭ ದೂಡುವ ಮೂಲಕ ನಿಂದಿಸಿದ್ದರು ಎನ್ನಲಾಗಿರುವ ಜೇಮ್ಸ್ ಆ್ಯಂಡರ್ಸನ್ ಅವರು ಪ್ರಕರಣದಲ್ಲಿ ತಪ್ಪಿಸ್ಥರಲ್ಲ ಎಂದು ನ್ಯಾಯಾಂಗ ಆಯುಕ್ತರು ತೀರ್ಪು ನೀಡಿದ್ದರು. ಈಗ ಬಿಸಿಸಿಐ ಮುಂದೇನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.