ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ಗೆ ಟೀಂ ಇಂಡಿಯಾ ಭೇಟಿ

Rashmi Kasaragodu
Updated On : 7 Aug 2014, 12:25 pm

ಮೆಂಚೆಸ್ಟರ್: ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವ ಭಾರತ ತಂಡ, ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ಗೆ ಭೇಟಿ ನೀಡಿದೆ.
ಭಾರತ ತಂಡದ ಆಟಗಾರರು ಬಸ್‌ನಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿರುವ ಫುಟ್ಬಾಲ್ ಮೈದಾನಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಯನ್ನ್ನು ವೀಕ್ಷಿಸಿದರು..
ಫುಟ್ಬಾಲ್ ಕ್ರೇಸ್ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ, ಮಾರ್ಗದರ್ಶಿಯೊಬ್ಬರೊಂದಿಗೆ ಆಟಗಾರರ ಡ್ರೆಸಿಂಗ್ ರೂಂನಿಂದ ಹಿಡಿದು ಮೈದಾನದಲ್ಲಿರುವ ಎಲ್ಲ ವ್ಯವಸ್ಥೆಯನ್ನು ನೋಡಿತು. ಕೊನೆಗೆ ಪಂದ್ಯಗಳು ನಡೆಯುವ ಮೈದಾನವನ್ನು ನೋಡಿ ಭಾರತ ತಂಡದ ಆಟಗಾರರು ಸಂತಸಪಟ್ಟರು. ಅಲ್ಲಿ ಕೆಲ ಯುವ ಆಟಗಾರರು ಫುಟ್ಬಾಲ್ ಕಲಿಯುತ್ತಿರುವುದನ್ನು ನೋಡಿದ ತಂಡ, ಮಾರ್ಗದರ್ಶಕರು ನೀಡಿದ ಪ್ರತಿಯೊಂದು ಮಾಹಿತಿಯನ್ನು ತುಂಬು ಆಸಕ್ತಿಯಿಂದ ಕೇಳಿಕೊಳ್ಳುತ್ತಿತ್ತು ಎಂದು ಬಿಸಿಸಿಐ ಟಿವಿ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement