ರಾಜ್ಯಸಭೆಗೆ ಸಚಿನ್ ತೆಂಡೂಲ್ಕರ್ ಗೈರು: ರಾಜೀವ್ ಶುಕ್ಲಾ ಆಕ್ಷೇಪ
ಕ್ರಿಕೆಟ್ ದೇವರು ಎಂದೇ ಹೆಸರಾಗಿರುವ...
ನವದೆಹಲಿ: ಕ್ರಿಕೆಟ್ ದೇವರು ಎಂದೇ ಹೆಸರಾಗಿರುವ ಸಚಿನ್ ತೆಂಡೂಲ್ಕರ್ ಅವರು, ಬ್ಯಾಟ್ ಹಿಡಿಯಲಿ ಹಿಡಿಯದಿರಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ರಾಜ್ಯಸಭೆ ಸದಸ್ಯರಾಗಿರುವ ಸಚಿನ್ ಅವರು ಅತ್ತ ಸುಳಿಯದಿರುವ ಕುರಿತು ಐಪಿಎಲ್ ಮಾಜಿ ಮುಖ್ಯಸ್ಥ ಮತ್ತು ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಮೇಲ್ಮನೆಯಲ್ಲಿ ಕಡಿಮೆ ಹಾಜರಾತಿ ಹಾಕಿರುವ ಬ್ಯಾಟಿಂಗ್ ದಂತಕತೆಸಚಿನ್ ಮತ್ತು ನಟಿ ರೇಖಾ ವಿರುದ್ಧ ಶುಕ್ಲಾ ಟೀಕೆ ಮಾಡಿದ್ದಾರೆ. 'ರಾಜ್ಯಸಭೆಗೆ ಹಾಜರಾಗಲು ಆಗದಿದ್ದರೆ, ನೀವೇಕೆ ಸಂಸದರಾಗಿ ಆಯ್ಕೆಯಾಗುತ್ತೀರಿ' ಎಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಶುಕ್ಲಾ ಅವರು ಸಚಿನ್ ಅವರನ್ನ್ನು ಪ್ರಶ್ನಿಸ್ನಿದ್ದಾರೆ. ಕಳೆದ ವಾರ ಸಚಿನ್ ಅವರೊಂದಿಗೆ ಈ ಕುರಿತು ರಾಜೀವ್ ಶುಕ್ಲಾ ಮಾತನಾಡಿದ್ದಾರಂತೆ. ಅಲ್ಲದೆ, ಸಂಸತ್ತಿಗೆ ಆಗಮಿಸುವಂತೆ ಕೇಳಿಕೊಂಡಿದ್ದಾರಂತೆ. ಸಚಿನ್ ಸಂಸತ್ತಿಗೆ ಬರುವುದಾಗಿ ವಾಗ್ದಾನ ಮಾಡಿದ್ದಾರಂತೆ. ಸಚಿನ್ ಮತ್ತು ರೇಖಾ ಇಬ್ಬರೂ ಸಂಸತ್ತಿಗೆ ಬರುವ ಬಗ್ಗೆ ಭರವಸೆ ಇದೆ ಎಂದು ಶುಕ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿನ್ ಅವರು ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕೇವಲ ಶೇ. 5ರಷ್ಟು ಮಾತ್ರ ಹಾಜರಾತಿ ಹೊಂದಿದ್ದಾರೆ.