ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಕಪಿಲ್
ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗಾಗಿ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ...
ನವದೆಹಲಿ: ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗಾಗಿ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ನೇಮಿಸಲಾಗಿರುವ ಸಮಿತಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ದಂತಕತೆ ಕಪಿಲ್ ದೇವ್ ಮುಖ್ಯಸ್ಥರಾಗಿದ್ದಾರೆ.
ಇನ್ನು ದ್ರೋಣಾಚಾರ್ಯ ಪುರಸ್ಥಾರಕ್ಕೆ ಅರ್ಹರನ್ನು ಆಯ್ಕೆ ಮಾಡಲು ನೇಮಕಗೊಂಡಿರುವ ಸಮಿತಿಯ ಉಸ್ತುವಾರಿಯನ್ನು ಹಾಕಿ ತಂಡದ ಮಾಜಿ ನಾಯಕ ಅಜಿತ್‌ಪಾಲ್ ಸಿಂಗ್ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಕ್ರೀಡಾ ಕಾರ್ಯದರ್ಶಿ ಅಜಿತ್ ಶರಣ್, ಸುದ್ದಿ ಸಂಸ್ಥೆಗೆ ಈ ವಿಷಯ ತಿಳಿಸಿದ್ದು, ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಗೆ ಕಪಿಲ್ ಮುಖ್ಯಸ್ಥರಾಗಲಿದ್ದಾರೆ ಎಂದರು.
ಮಾಜಿ ಹಾಕಿ ದಂತಕತೆ ಮೇಜರ ಧ್ಯಾನಚಂದ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಅಂದು ಕ್ರೀಡಾಪಡುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಗಾಗಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ರಚಿಸಲಾಗಿರುವ ಎರಡು ಸಮಿತಿಗಳಲ್ಲಿ ತಲಾ 15 ಸದಸ್ಯರಿದ್ದು, ಇದರಲ್ಲಿ 12 ಕ್ರೀಡಾ ಪ್ರಮುಖರು ಮತ್ತು ಮೂವರು ಅಧಿಕಾರಿಗಳಿರುತ್ತಾರೆ.