ಸುಸ್ಥಿತಿಯಡೆ ಆಂಗ್ಲರ ನಡೆ
ಮೊದಲ ಇನಿಂಗ್ಸ್‌ನಲ್ಲಿ ಭಾರತವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಆತಿಥೇಯ...
ಮ್ಯಾಂಚೆಸ್ಟರ್: ಮೊದಲ ಇನಿಂಗ್ಸ್‌ನಲ್ಲಿ ಭಾರತವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ಆತಿಥೇಯ ಇಂಗ್ಲೆಂಡ್ ತಂಡ, ಓಡ್ಲ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಸಾಗಿದೆ.
ಇಯಾನ್ ಬೆಲ್(58) ಅರ್ಧ ಶತಕ ಮತ್ತು ಅರ್ಧ ಶತಕದ ಹೊಸ್ತಿಲಲ್ಲಿರುವ ಜೋ ರೂಟ್(48) ಅವರ ತಕ್ಕ ಬ್ಯಾಟಿಂಗ್ ನೆರವಿನೊಂದಿಗೆ 2ನೇ ದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ, ಇಂಗ್ಲೆಂಡ್ 230 ರನ್‌ಗಳ ಗಡಿ ದಾಟಿತ್ತು.
ವರುಣ ಅಡ್ಡಿ: ಎರಡನೇ ದಿನ ಭೋಜನ ವಿರಾಮದ ನಂತರ ಕೆಲವೇ ಹೊತ್ತಿನಲ್ಲಿ ಮಳೆ ಆರಂಭವಾಯಿತು. ಆಗ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 237 ರನ್‌ಗಳಿಸಿತ್ತು. ಜೋ ರೂಟ್ ಮತ್ತು ಜೋಸ್ ಬಟ್ಲರ್(22) ಕ್ರೀಸ್‌ನಲ್ಲಿದ್ದರು.
ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 152
ಇಂಗ್ಲೆಂಡ್ ಮೊದಲ ಇನಿಂಗ್ಸ್ 6 ವಿಕೆಟ್‌ಗೆ 237
(ಮೊದಲ ದಿನ 3ಕ್ಕೆ 113ರಿಂದ ಮುಂದುವರಿದಿದೆ)
ಇಯಾನ್ ಬೆಲ್ ಸಿ ಧೋನಿ ಬಿ ಭುವನೇಶ್ವರ 58, ಕ್ರಿಸ್ ಜೋರ್ಡಾನ್ ಸಿ ವರುಣ್ ಬಿ ಭುವನೇಶ್ವರ 13, ಜೋ ರೂಟ್ ಅಜೇಯ 48, ಮೊಯಿನ್ ಅಲಿ ಬಿ ವರುಣ್ 13, ಜೋಸ್ ಬಟ್ಲರ್ ಅಜೇಯ 22,
ಇತರೆ (ಬೈ-5, ಲೆಗ್ ಬೈ-9, ವೈಡ್-4, ನೋಬಾಲ್-5) 23
ವಿಕೆಟ್ ಪತನ: 1-21, 1-36, 3-113, 4-136, 5-140, 6-170
ಬೌಲಿಂಗ್: ಭುವನೇಶ್ವರ 18-6-47-3, ಪಂಕಜ್ ಸಿಂಗ್ 17-2-79-0, ಆರ್. ಅಶ್ವಿನ್ 13-1-28-0, ರವೀಂದ್ರ ಜಡೇಜಾ 7-0-21-0.