ಭಾರತಕ್ಕೆ ಓಲ್ಡ್ ಫ್ಲಾಪರ್ಡ
ಆಂಗ್ಲ ಪಡೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡ ಭಾರತ...
ಮ್ಯಾಂಚೆಸ್ಟರ್: ಆಂಗ್ಲ ಪಡೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 54 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿತು. ಇದರೊಂದಿಗೆ, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆ ಕಂಡುಕೊಂಡಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 152 ರನ್ ಗಳಿಸಿ ಆಲೌಟ್ ಆಗಿತ್ತು. ನಂತರ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 367 ರನ್ ಗಳಿಸಿತ್ತು. ಹೀಗಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 215 ರನ್‌ಗಳ ಹಿನ್ನಡೆ ಅನುಭವಿಸಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲೂ ಎಡವಿದ ಭಾರತದ ಬ್ಯಾಟ್ಸ್‌ಮನ್‌ಗಳಿಗೆ 43 ಓವರ್‌ಗಳಲ್ಲಿ ಕೇವಲ 161 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಪಂದ್ಯ 3ನೇ ದಿನಕ್ಕೆ ಮುಕ್ತಾಯವಾಯಿತು.
ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 153
ಇಂಗ್ಲೆಂಡ್ ಮೊದಲ ಇನಿಂಗ್ಸ್ 367
ಜೋ ರೂಟ್ ಸಿ ಧೋನಿ ಬಿ ಪಂಕಜ್ ಸಿಂಗ್ 77, ಜೋಸ್ ಬಟ್ಲರ್ ಸಿ ಪೂಜಾರ ಬಿ ಪಂಕಜ್ ಸಿಂಗ್ 70, ಕ್ರಿಸ್ ವೋಕ್ಸ್ ಅಜೇಯ 26, ಸ್ಟುವರ್ಟ್ ಬ್ರಾಡ್ ಗಾಯಗೊಂಡು ನಿವೃತ್ತಿ 12, ಜೇಮ್ಸ್ ಆ್ಯಂಡರ್ಸನ್ ಎಲ್‌ಬಿ ಜಡೇಜಾ 9, ಇತರೆ (ಬೈ-5, ಲೆಗ್‌ಬೈ-6, ವೈಡ್ 6, ನೋಬಾಲ್ 6) 29
ಬೌಲಿಂಗ್: ಭುವನೇಶ್ವರ ಕುಮಾರ್ 24 7 75 3, ಪಂಕಜ್ ಸಿಂಗ್ 28 5 113 2, ವರುಣ್ ಅರುಣ್ 26 4 97 3 ಆರ್. ಅಶ್ವಿನ್ 14 1 29 0 ರವೀಂದ್ರ ಜಡೇಜಾ 13.3 1 36 1.
ಭಾರತ ದ್ವಿತೀಯ ಇನಿಂಗ್ಸ್ 161
ಮುರಳಿ ವಿಜಯ್ ಎಲ್‌ಬಿ ವೋಕ್ಸ್ 18, ಗೌತಮ್ ಗಂಭೀರ್ ಸಿ ಬಟ್ಲರ್ ಬಿ ಆ್ಯಂಡರ್ಸನ್ 18, ಚೇತೇಶ್ವರ ಪೂಜಾರ ಎಲ್‌ಬಿ ಮೋಯಿನ್ ಅಲಿ 17, ವಿರಾಟ್ ಕೊಹ್ಲಿ ಸಿ ಬೆಲ್ ಬಿ ಆ್ಯಂಡರ್ಸನ್ 7, ಅಜಿಂಕ್ಯ ರಹಾನೆ ಸಿ ಮತ್ತು ಬಿ ಅಲಿ 1, ಧೋನಿ ಸಿ ಬ್ಯಾಲೆನ್ಸ್ ಬಿ ಅಲಿ 27, ಜಡೇಜಾ ಸಿ ಜೋರ್ಡಾನ್ ಬಿ ಅಲಿ 4, ಆರ್. ಅಶ್ವಿನ್ ಅಜೇಯ 46, ಭುವನೇಶ್ವರ ರನೌಟ್ (ಅಲಿ/ಬಟ್ಲರ್) 10, ವರುಣ್ ಅರುಣ್ ಸಿ ಬಟ್ಲರ್ ಬಿ ಜೋರ್ಡಾನ್ 9, ಪಂಕಜ್ ಸಿಂಗ್ ಬಿ ಜೋರ್ಡಾನ್ 0, ಇತರೆ (ಬೈ 1, ಲೆಗ್‌ಬೈ 1, ವೈಡ್ 1, ನೋಬಾಲ್ 1) 4.