ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಆರ್ಚರಿ: ಭಾರತಕ್ಕೆ ಚಿನ್ನ, ಬೆಳ್ಳಿ

ಆರ್ಚರಿ ವಿಶ್ವಕಪ್ 4ನೇ ಹಂತದ ಟೂರ್ನಿಯಲ್ಲಿ ಮೂರು ಸ್ವರ್ಣ ಪದಕಕ್ಕೆ ಗುರಿ...

Vishwanath S
Updated On : 11 Aug 2014, 11:10 am

ವ್ರೋಕ್ಲಾವ್(ಪೊಲೆಂಡ್): ಆರ್ಚರಿ ವಿಶ್ವಕಪ್ 4ನೇ ಹಂತದ ಟೂರ್ನಿಯಲ್ಲಿ ಮೂರು ಸ್ವರ್ಣ ಪದಕಕ್ಕೆ ಗುರಿ ಇಟ್ಟಿದ್ದ ಭಾರತ ಈಗ ಮಿಶ್ರ ಫಲ ಅನುಭವಿಸಿದೆ.

ಮಹಿಳಾ ರೆಕುರ್ವ್ ತಂಡ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರೆ, ಪುರುಷರ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಭಾರತ ಮುಂದಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಉತ್ತಮ ತಯಾರಿ ನಡೆಸಿದೆ.

ಭಾನುವಾರ ನಡೆದ ಫೈನಲ್ ಸುತ್ತಿನ ಹಣಾಹಣಿಯಲ್ಲಿ ಭಾರತದ ಮಹಿಳಾ ತಂಡ ಎದುರಾಳಿ ಮೆಕ್ಸಿಕೊ ವಿರುದ್ಧ 6-0 ಅಂತರದ ಮಹತ್ವದ ಗೆಲವು ದಾಖಲಿಸಿತು. ಈ ಮೂಲಕ ಮಹಿಳಾ ತಂಡ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು.

ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇಕ ದೀಪಿಕಾ ಕುಮಾರಿ, ಗೆಲವಿನ ರೂವಾರಿಯಾದರು. ದೀಪಿಕಾ ಭಾರತದ ಪರ ಐದು ಬಾರಿ ಪೂರ್ಣ 10 ಅಂಕಗಳನ್ನು ಪಡೆಯುವ ಮೂಲಕ ಭಾರತಕ್ಕೆ ಅತ್ಯುತ್ತಮ ಮುನ್ನಡೆ ತಂದುಕೊಟ್ಟರು.

ಇನ್ನು ಭಾರತದ ಪುರುಷರ ತಂಡ ಮೆಕ್ಸಿಕೊ ವಿರುದ್ಧ 3-5 ಅಂಕಗಳ ಅಂತರದಲ್ಲಿ ಮುಖಭಂಗ ಅನುಭವಿಸಿದೆ. ಆರಂಭದಲ್ಲೇ ಭಾರತದ ವಿರುದ್ಧ ನಿಯಂತ್ರಣ ಸಾಧಿಸಿದ ಮೆಕ್ಸಿಕೊ 2-0 ಅಂತರದ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ ಮೆಕ್ಸಿಕೊ 5-3 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿತು. ಇನ್ನು ಕಂಚಿಗಾಗಿ ನಡೆದ ಪಂದ್ಯದಲ್ಲಿ ರಷ್ಯಾ ತಂಡ ಚೀನಾ ವಿರುದ್ಧ ಸೋಲನುಭವಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement