ದ್ರೋಣಾಚಾರ್ಯ ಪ್ರಶಸ್ತಿಗೆ ಐವರು ನಾಮಾಂಕಿತ
ಗ್ರಿಕೊ ರೋಮನ್ ಕುಸ್ತಿ ಕೋಚ್ ...
ನವದೆಹಲಿ: ಗ್ರಿಕೊ ರೋಮನ್ ಕುಸ್ತಿ ಕೋಚ್ ಮಹಾವೀರ್ ಪ್ರಸಾದ್, ಬಾಕ್ಸಿಂಗ್ ಕೋಟ್ ಜಿ.ಮನೋಹರನ್ ಸೇರಿದಂತೆ ಐವರು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಆಯ್ಕೆ ಸಮಿತಿಯು, ಕ್ರೀಡಾ ಇಲಾಖೆಗೆ ಶಿಫಾರಸ್ಸು ಮಾಡಿದೆ.
ಸೋಮವಾರ ಸಭೆ ಸೇರಿದ ಸಮಿತಿ ಈ ಇಬ್ಬರ ಜತೆಗೆ ರೋಯಿಂಗ್ ಕೋಚ್ ಜೋಸ್ ಜಾಕೊಬ್, ಅಥ್ಲೆಟಿಕ್ಸ್ ಕೋಚ್ ಎನ್.ಲಿಂಗಪ್ಪ ಹಾಗೂ ಜೂಡೊ ಕೋಚ್ಗುರುಚರಣ್ ಸಿಂಗ್ಗೊಗಿ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಗುರುಚರಣ್ ಸಿಂಗ್ ಗೊಗಿ ಅವರನ್ನು ನಾಮಾಂಕಿತ ಮಾಡುವ ಮೂಲಕ, ಇದೇ ಮೊದಲ ಬಾರಿಗೆ ಜೂಡೊ ಕ್ರೀಡೆಯಿಂದ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಿದಂತಾಗಿದೆ.
ಇನ್ನು ಡೇವಿಸ್ ಕಪ್ ಕೋಚ್ ಜೀಶನ್ ಅಲಿ, ಹಾಕಿ ಒಲಿಂಪಿಯನ್ ಗುರ್ ಮೈಲ್ ಸಿಂಗ್, ಏಷ್ಯನ್ ಗೇಮ್ಸ್ ಡೈವಿಂಗ್ ಚಾಂಪಿಯನ್ ಕೆ.ಪಿತಕ್ಕರ್ ಅವರನ್ನು ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.