ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಡತನಕ್ಕೆ ಹಾಕಿ ತಾರೆ ಬಲಿ

ಭಾರತದಲ್ಲಿ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಹಾಗೂ ಆಟಗಾರರನ್ನು ತೀವ್ರ...

Mainashree
Updated On : 12 Aug 2014, 3:00 am

ಸಂಗರೂರ್: ಭಾರತದಲ್ಲಿ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಹಾಗೂ ಆಟಗಾರರನ್ನು ತೀವ್ರ ನಿರ್ಲಕ್ಷ್ಯಕ್ಕೆ ಒಳಪಡಿಸಲಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಮಹಿಳಾ ಹಾಕಿ ಆಟಗಾರ್ತಿ ರಾಜ್ವಿಂದರ್ ಕೌರ್ ಬಡತನದ ಬೇಗೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ನ ಸಂಗರೂರ್ನಲ್ಲಿ ನಡೆದಿದೆ.

20 ವರ್ಷದ ರಾಜ್ವಿಂದರ್ ಕೌರ್ ದ್ವಿತೀಯ ಬಿ.ಎ.ವ್ಯಾಸಾಂಗ ಮಾಡುತ್ತಿದ್ದು, ಈ ಬಾರಿಯ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳೆದ ಬುಧವಾರ ರೈಲಿನ ಕೆಳಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕೆ ದ್ವಿತೀಯ ವರ್ಷದ ಬಿಎ ಪದವಿಗೆ ಸೇರಲು ಬಯಸಿದ್ದಳು. ಆದರೆ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ ಹಿನ್ನೆಲೆಯಲ್ಲಿ ನಮಗೆ ಶುಲ್ಕ ಪಾವತಿಸಲು ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಇದರಿಂದ ಮನನೊಂದು ಆಕೆ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಆಕೆಯ ತಂದೆ ಸುರೀಂದರ್ ಸಿಂಗ್ ತಿಳಿಸಿದ್ದಾರೆ.

ಕಳೆದ ಆಗಸ್ಟ್ 5 ರಂದು ಮನೆಯಿಂದ ಹೊರ ಹೋದ ರಾಜ್ವಿಂದರ್ ಕೌರ್ ಮತ್ತೆ ಮನೆಗೆ ವಾಪಸ್ಸಾಗಲಿಲ್ಲ. ಮರು ದಿನ ಕುಟುಂಬದವರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ದೊರೆಯಿತು. ಆಕೆಯ ದೇಹ ನಿಲೊವಾಲ್ ರೈಲ್ವೆ ಕ್ರಾಸಿಂಗ್ ಬಳಿ ಎರಡು ಭಾಗವಾಗಿ ದೊರೆತಿದೆ.

ರಾಜ್ವಿಂದರ್ ಕೌರ್ 20 ವರ್ಷದೊಳಗಿನ ರಾಷ್ಟ್ರೀಯ ತಂಡದ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ತೋರಿದ್ದಳು. ಅಲ್ಲದೆ ಆಕೆ ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ಅಧಿಕಾರಿಯಾಗಿ ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ಹೊಂದಿದ್ದಳು ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement