ಹರಿಣಗಳಿಗೆ ಜಯದ ಹಾರ
ಆತಿಥೇಯ ಜಿಂಬಾಬ್ವೆ ವಿರುದ್ಧ ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ...
ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಪಂದ್ಯದ ನಾಲ್ಕನೇ ದಿನವಾದ ಮಂಗಳವಾರವೇ ಗೆಲುವಿನ ದಡ ಸೇರಿದ ಹರಿಣಗಳು ಒಂದು ದಿನ ಬಾಕಿ ಇರುವಂತೆಯೇ ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿದ್ದಾರೆ.
ಪಂದ್ಯದ ಮೂರನೇ ದಿನ ಜಿಂಬಾಬ್ವೆ ವಿರುದ್ಧ ಮೊದಲ ಇನಿಂಗ್ಸ್ 141 ರನ್ ಮುನ್ನಡೆ ಸಾಧಿಸದ್ದ ದಕ್ಷಿಣ ಆಫ್ರಿಕಾ ತಂಡ, ನಂತರ ದಿನದಾಟ ಮುಕ್ತಾಯಕ್ಕೆ ಜಿಂಬಾಬ್ವೆ ತಂಡ 28 ರನ್ ಗಳಿಸಿದಾಗ 1 ವಿಕೆಟ್ ಪಡೆದುಕೊಂಡಿತ್ತು.
ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರಿಸಿದ ಜಿಂಬಾಬ್ವೆ ಹರಿಣಗಳ ಬೌಲಿಂಗ್ ದಾಳಿಗೆ ನಲುಗಿತು. ವುಸಿ ಸಿಬಾಂದ (45) ಹಾಗೂ ರಿಚ್‌ಮಂಡ್ ಮುತುಂಬಮಿ (43) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪರಿಣಾಮ ಜಿಂಬಾಬ್ವೆ ತಂಡ 76.2 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು.
ಈ ಮೂಲಕ ಹರಿಣಗಳಿಗೆ ಕೇವಲ 41 ರನ್‌ಗಳ ಗುರಿ ನೀಡಿತು.
ದಕ್ಷಿಮ ಆಫ್ರಿಕಾ ತಂಡದ ಪರ ಡೆನ್ ಪಿಡೆಟ್ 4, ಡೇಲ್ ಸ್ಪೇಯ್ನ್ ಹಾಗೂ ಮಾರ್ನ್ ಮಾರ್ಕೆಲ್ ತಲಾ 3 ವಿಕೆಟ್ ಕಬಳಿಸಿದರು.
ಅಲ್ಪ ಗುರಿಯನ್ನು ಬೆನ್ನಟ್ಟಿದ ಪ್ರವಾಸಿಗರು 10.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 44 ರನ್ ದಾಖಲಿಸಿ ಗೆಲುವಿನ ದಡ ಸೇರಿತು.
ಹರಿಣಗಳ ಪರ ಡೀನ್ ಎಲ್ಗರ್ (21), ಆಲ್ವಿರೊ ಪೀಟರ್ಸನ್ (ಅಜೇಯ 17) ಹಾಗೂ ಫಫ್ ಡುಪ್ಲೆಸಿಸ್ (ಅಜೇಯ 5) ರನ್ ಗಳಿಸಿದರು. ಇನ್ನು ಜಿಂಬಾಬ್ವೆ ಪರ ಟೆಂಡೈ ಚಟಾರ, ಎಲ್ಗರ್ ವಿಕೆಟ್ ಪಡೆದುಕೊಂಡರು.
ಇನ್ನು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಎರಡೂ ಇನಿಂಗ್ಸ್‌ನಲ್ಲೂ ತಲಾ 4 ವಿಕೆಟ್ ಪಡೆದ ಡೆನ್ ಪಿಡೆಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 256 ಮತ್ತು 181 (ವುಸಿ ಸಿಬಾಂದ 45, ರಿಟ್‌ಮಂಡ್ ಮುತುಂಬಮಿ 43, ಪಿಡೆಟ್ 62 ಕ್ಕೆ4)
ದಕ್ಷಿಣ ಆಫ್ರಿಕಾ 397 ಮತ್ತು 44 ಕ್ಕೆ 1 ( ಎಲ್ಗರ್ 21, ಪೀಟರ್ಸನ್ ಅಜೇಯ 17, ಚಟಾರ 5ಕ್ಕೆ 1).