ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೆಡರರ್ ಐತಿಹಾಸಿಕ ಮೈಲುಗಲ್ಲು

ಟೆನಿಸ್ ಲೋಕದ ದಿಗ್ಗಜ ಸ್ವೀಜರ್ಲೆಂಡ್‌ನ ರೋಜರ್ ಫೆಡರರ್ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ್ದಾರೆ.

Vishwanath S
Updated On : 15 Aug 2014, 11:25 am

ಸಿನ್ಸಿನಾಟಿ: ಟೆನಿಸ್ ಲೋಕದ ದಿಗ್ಗಜ ಸ್ವೀಜರ್ಲೆಂಡ್‌ನ ರೋಜರ್ ಫೆಡರರ್ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ದ್ವೀತಿಯ ಸುತ್ತಿನಲ್ಲಿ ವಸೆಕ್ ಪೊಸ್ಪಿಸಿಲ್ ಅವರನ್ನು ಸೋಲಿಸಿದ ಫೆಡರರ್ ಎಟಿಪಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ 300 ಪಂದ್ಯಗಳನ್ನು ಗೆದ್ದ ಐತಿಹಾಸಿಕ ದಾಖಲೆ ಬರೆದರು.

2 ಗಂಟೆಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ 33 ವರ್ಷದ ಫೆಡರರ್ ಅವರು ವಸೆಕ್ ಅವರನ್ನು 7-6(7/4), 5-7, 6-2 ಸೆಟ್‌ಗಳಿಂದ ಸೋಲಿಸುವ ಮೂಲಕ ವಿಜಯ ಕಂಡುಕೊಂಡರು. ಫೆಡರರ್‌ಗೆ ಯುಎಸ್ ಓಪನ್ ಗ್ರಾನ್ ಸ್ಲ್ಯಾಮ್ ಪಂದ್ಯಾವಳಿ ತಯಾರಿಗೆ ಇದು ಕೊನೆಯ ಪಂದ್ಯಾವಳಿಯಾಗಿದೆ.

ಇದೇ ಪಂದ್ಯಾವಳಿಯಲ್ಲಿ 5 ವರ್ಷಗಳ ಹಿಂದೆ ಲಿಟಾನ್ ಹೆವಿಟ್ ಅವರನ್ನು ಸೋಲಿಸಿದ್ದ ಫೆಡರರ್ 200ನೇ ಎಟಿಪಿ ಮಾಸ್ಟರ್ಸ್ ಪಂದ್ಯವನ್ನು ಗೆದ್ದುಕೊಂಡಿದ್ದರು. ಈ ಪಂದ್ಯಾವಳಿಗೆ ಆಗಮಿಸುವ ಮುನ್ನ ಅವರು ಟೊರಂಟೊದಲ್ಲಿ ನಡೆದ ರೋಜರ್ಸ್ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜೋ ವಿಲ್ಫ್ರೆಡ್ ಸೋಂಗಾ ವಿರುದ್ಧ ಸೋಲನುಭವಿಸುವ ಮೂಲಕ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದರು.

ತೀವ್ರ ಪೈಪೋಟಿಯಿಂದ ನಡೆದು, ಟೈಬ್ರೇಕರ್‌ಗೆ ಜಾರಿದ್ದ ಮೊದಲ ಸೆಟ್‌ನಲ್ಲಿ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಫೆಡರರ್, ನಂತರ ದ್ವಿತೀಯ ಸೆಟ್‌ನಲ್ಲಿ ಕೈಚೆಲ್ಲಿದ್ದರು. ಆದರೆ, ಮೂರನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಮೇಲುಗೈ ಸಾಧಿಸುವ ಮೂಲಕ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement