ಭಾರತಕ್ಕೆ ದಂಡ
ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ ನಡೆದ ಐಧನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್...
ಲಂಡನ್: ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ ನಡೆದ ಐಧನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪಂದ್ಯದ ಪ್ರತಿಶತ 60ರಷ್ಟು ದಂಡ ವಿಧಿಸಲಾಗಿದ್ದರೆ, ಉಳಿದ ಆಟಗಾರರಿಗೆ ತಲಾ 30ರಷ್ಟು ದಂಡ ನಿಗದಿಪಡಿಸಲಾಗಿದೆ. ಮ್ಯಾಚ್ ರೆಫರಿ ರಂಜನ್ ಮುದುಗಲೆ ಈ ದಂಡ ಪ್ರಕಟಿಸಿದ್ದಾರೆ. ಭಾರತದ ಬೌಲರ್ಗಳು ನಿಗದಿತ ಅವಧಿಗೆ ಮೂರು ಓವರುಗಳನ್ನು ಕಡಿಮೆ ಎಸೆದಿದ್ದಾರೆ ಎಂದು ಮದುಗಲೆ ಆರೋಪಿಸಿದ್ದಾರೆ. ಐಸಿಸಿ ನೀತಿ ಸಂಹಿತೆ ಪ್ರಕಾರ ನಿಗದಿತ ಅವಧಿಗೆ ಓವರ್ ಪೂರ್ಣಗೊಳಿಸದಿದ್ದರೆ, ತಲಾ ಓವರಿಗೆ ಆಟಗಾರರಿಗೆ ಪ್ರತಿಶತ 10ರಷ್ಟು ಮತ್ತು ನಾಯಕನಿಗೆ 20ರಷ್ಟು ದಂಡ ವಿಧಿಸಲಾಗುತ್ತದೆ. ಇಲ್ಲಿ 3 ಓವರುಗಳನ್ನು ಕಡಿಮೆ ಎಸೆದಿದ್ದರಿಂದ ಹೆಚ್ಚಿನ ದಂಡಕ್ಕೆ ಗುರಿಯಾಗಬೇಕಾಗಿದೆ.