ಕ್ರೀಡಾ ಇಲಾಖೆ ಮೇಲೆ ದೂರು: ಮನೋಜ್
ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ತಮ್ಮ ಹೆಸರನ್ನು ಆಯ್ಕೆ ಮಾಡದ ಹಿನ್ನೆಲೆ...
ಪಟಿಯಾಲ: ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ತಮ್ಮ ಹೆಸರನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಬಾಕ್ಸರ್ ಮನೋಜ್ ಕುಮಾರ್, ನನ್ನನ್ನು ಅವಮಾನಿಸಲಾಗಿದ್ದು, ಕ್ರೀಡಾ ಸಚಿವಾಲಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿ ಮಂಗಳಾವರ ಈಗಾಗಲೇ ಪ್ರಕಟಿಸಿರು ವ 15 ಕ್ರೀಡಾಪಟುಗಳ ಪಟ್ಟಿಯಲ್ಲಿ ಬಾಕ್ಸರ್ ಜೈ ಭಗವಾನ್ ಅವರ ಹೆಸರನ್ನು ಸೂಚಿಸಿತ್ತು. ಅಲ್ಲದೆ ಈ ಪಟ್ಟಿಯಲ್ಲಿ ಯಾವುದೇ ರೀತಿಯ ಬದವಾವಣೆಯನ್ನು ಮಾಡದಿರಲು ನಿರ್ಧರಿಸಿದ ನಂತರಮ ಮನೋಜ್ ಕುಮಾರ್ ಕೋರ್ಟ್ ಮೆಟ್ಟಿಲೇರುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಪಂಜಾಬ್, ಹರಿಯಾಣ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಸಕರಾಗಿರುವ ಜಿಜಿ ಥಾಮ್ಸನ್, ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದು, ಮಂಗಳವಾರ ನಡೆದ ಸಭೆಯಲ್ಲಿ 7 ಅಥ್ಲೀಟ್‌ಗಳ ಬಗ್ಗೆ ಚರ್ಚೆ ನಡೆಸಲಾಯಿತಾದರೂ, ಅಂತಿಮವಾಗಿ ಎಲ್ಲಾ ಸದಸ್ಯರ ಸರ್ವಾನುಮತದ ಮೇರೆಗೆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ತರದಿರಲು ನಿರ್ಧಾರಿಸಲಾಯಿತು.
ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಹಾಗೂ ಸ್ವತಃ ಥಾಮ್ಸನ್ ಅವರೇ ನನ್ನ ಹೆಸರನ್ನು ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಸೇರಿಸುವ ಭರವಸೆ ನೀಡಿದ್ದರು ಎಂದು ಮನೋಜ್ ತಿಳಿಸಿದ್ದಾರೆ.
ಆಗಸ್ಟ್ 13ರಂದು ನನ್ನ ಸಹೋದರ ಕ್ರೀಡಾ ಕಾರ್ಯದರ್ಶಿ ಅಜಿತ್ ಶರಣ್ ಅವರನ್ನು ಭೇಟಿ ಮಾಡಿದಾಗ, ನಾನು ಡೋಪಿಂಗ್ ಪರೀಕ್ಷೆಯಲ್ಲಿ ಭಾಗಿಯಾಗಿರುವ ಬಗ್ಗೆ ಕ್ರೀಡಾ ಸಚಿವಾಲಯ ತಪ್ಪು ಮಾಹಿತಿ ಪಡೆದಿದೆ. ಅದನ್ನು ಸರಿಪಡಿಸಲಾಗುವುದು. ಅಲ್ಲದೆ ಪರಿಶೀಲನಾ ಸಭೆಯಲ್ಲಿ ಹೆಸರನ್ನು ಸೇರಿಸುವುದಾಗಿ ತಿಳಿಸಿದ್ದರು ಎಂದು ಮನೋಜ್ ಪ್ರತಿಕ್ರಿಯಿಸಿದ್ದಾರೆ.