ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಾಟ್ನಾಗೆ ಸೋತ ಬೆಂಗಳೂರು

ಅಂತಿಮ ಕ್ಷಣದಲ್ಲಿ ಎದುರಾಳಿ ರೋಚಕ ಮೈಲುಗೈ ಸಾಧಿಸಲು ಅವಕಾಶ...

Mainashree
Updated On : 26 Aug 2014, 10:01 am

ಬೆಂಗಳೂರು: ಅಂತಿಮ ಕ್ಷಣದಲ್ಲಿ ಎದುರಾಳಿ ರೋಚಕ ಮೈಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟ ಬೆಂಗಳೂರು ಬುಲ್ಸ್ ತಂಡ ಸೋಮವಾರ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ವಿರುದ್ದ 33-31 ಅಂಕಗಳ ಅಂತದಿಂದ ಸೋಲನುಭವಿಸಿತ್ತು. ಈ ವಿಜಯದೊಂದಿಗೆ ಒಟ್ಟು 45 ಅಂಕಗಳನ್ನು ಪಡೆದ ಪಾಟ್ನಾ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಆದರೆ, 37 ಅಂಕಗಳನ್ನು ಹೊಂದಿರುವ ಬೆಂಗಳೂರು ತಂಡ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಇದರೊಂದಿಗೆ ಬೆಂಗಳೂರು ತಂಡ0ದ ಸೆಮಿಫೈನಲ್ ಹಾದಿ ದುರ್ಗಮವಾಗಿ ಪರಿಣಮಿಸಿದೆ. ಕಾರಣ, ಬುಧವಾರ ಅಂತಿಮ ಲೀಗ್ ಪಂದ್ಯದಲ್ಲಿ ಪಂದ್ಯಾವಳಿಯ ಅಗ್ರ ಸ್ಥಾನದಲ್ಲಿರುವ ಜೈಪುರ ಪ್ಯಾಂಥರ್ಸ್ ವಿರುದ್ಧ ಸೆಣಸುವ ಮುನ್ನ, ಮಂಗಳವಾರ ತೆಲುಗು ಟೈಟಾನ್ಸ್ ವಿರುದ್ಧ ಹೋರಾಟ ನಡೆಸಬೇಕಿದೆ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದದ್ ಆತಿಥೇಯ ಬೆಂಗಳೂರು ತಂಡ, ಈ ಪಂದ್ಯದಲ್ಲಿ ಸೋಲನುಭವಸಿದ್ದು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿ ಬಳಗಕ್ಕೆ ನಿರಾಸೆ ಉಂಟುಮಾಡಿತು.

ತೀವ್ರ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ಪಾಟ್ನಾ ತಂಡದ ಪರ ರವಿ ದಲಾಲ್, ನಾಯಕ ಮಂದೀಪ್ ಕುಮಾರ್ ಹಾಗೂ ಸುರೇಶ್ ಕುಮಾರ್ ಅವರು ಅದ್ಭುತ ಪ್ರದರ್ಶನ ತೋರಿದರು.

ಇನ್ನು ಬುಲ್ಸ್ ಪರ ದೀಪಕ್ ಕುಮಾರ್ 8 ಅಂಕ ಗಳಿಸಿದರು. ಆದರೆ, ಅವರ ಪ್ರಯತ್ನ ತಂಡದ ಜಯಕ್ಕೆ ಸಾಕಾಗಲಿಲ್ಲ. ಪಂದ್ಯದಲ್ಲಿ ಸೈಮಿಫೈನಲ್ ಪ್ರವೇಶಿಸಲು 7 ಅಂಕಗಳ ಅಂತರದಿಂದ ಗೆಲ್ಲಬೇಕಾಗಿದ್ದ ಬುಲ್ಸ್ ತಂಡ ಮೊದಲಾರ್ಧ ಪಂದ್ಯದಲ್ಲಿ 18-13 ಅಂಕಗಳಿಂದ ಮುನ್ನಡೆ ಪಡೆದಿತ್ತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಅದು ಕೈಚೆಲ್ಲಿತ್ತು. ಇದಕ್ಕೂ ಮುನ್ನ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಪುಣೇರಿ ಪಾಲ್ಟಾನ್ ವಿರುದ್ದ 45-22 ಅಂಕಗಳಿಂದ ಜಯಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement