ನೊವಾಕ್, ಶರಪೋವಾ ಶುಭಾರಂಭ
ಯುಎಸ್ ಓಪನ್: ಆ್ಯಂಡಿ ಮರ್ರೆ, ವಿಲ್ಫ್ರೆಡ್ ಸೋಂಗಾ ದ್ವಿತೀಯ ಸುತ್ತಿಗೆ..
ಯುಎಸ್ ಓಪನ್: ಆ್ಯಂಡಿ ಮರ್ರೆ, ವಿಲ್ಫ್ರೆಡ್ ಸೋಂಗಾ ದ್ವಿತೀಯ ಸುತ್ತಿಗೆ
ನ್ಯೂಯಾರ್ಕ್: ನಂಬರ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಬ್ರಿಟನ್ನಿನ ಆ್ಯಂಡಿ ಮರ್ರೆ ಹಾಗೂ ರಷ್ಯಾದ ಮಾರಿಯಾ ಶರಪೋವಾ ಯುಎಸ್ ಓಪನ್ ಗ್ರಾನ್ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ್ದಾರೆ.
ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ 6-1, 6-2, 6-4 ನೇರ ಸೆಟ್ಗಳಿಂದ ಅರ್ಜೇಂಟೀನಾದ ಡೀಗೊ ಶ್ವರ್ಟಮಾನ್ ವಿರುದ್ಧ ಗೆಲುವು ದಾಖಲಿಸಿದರು.
ಎಂಟನೇ ಶ್ರೇಯಾಂಕಿತ ಆ್ಯಂಡಿ ಮರ್ರೆ 6-3, 7-6 (8-6), 1-6, 7-5 ಸೆಟ್ಗಳಿಂದ ಹಾಲೆಂಡ್ನ ರಾಬಿನ್ ಹಾಸೆ ಅವರನ್ನು ಮಣಿಸಿದರು.
ಶರಪೋವಾ ಮುನ್ನಡೆ
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಸೆಣಸಿನಲ್ಲಿ 5ನೇ ಶ್ರೇಯಾಂಕಿತೆ ಮರಿಯಾ ಶರಪೋವಾ 6-4, 6-0 ನೇರ ಸೆಟ್ಗಳಿಂದ ತಮ್ಮದೇ ದೇಶದ ಮಾರಿಯಾ ಕಿರಿಲೆಂಕೊ ವಿರುದ್ಧ ಜಯಗಳಿಸಿದರು.
ಮೊದಲ ಸೆಟ್ನಲ್ಲಿ ಎದುರಾಳಿಯಿಂದ ಸ್ವಲ್ಪ ಕಠಿಣ ಸವಾಲು ಎದುರಿಸಿದ್ದ ಶರಪೋವಾ ಎರಡನೇ ಸೆಟ್ನಲ್ಲಿ ಮಾತ್ರ ಎದುರಾಳಿಗೆ ಒಂದೂ ಗೇಮ್ ಗೆದ್ದುಕೊಳ್ಳಲು ಅವಕಾಶ ನೀಡದೇ ತಮ್ಮ ಪ್ರಭುತ್ವ ಸ್ಥಾಪಿಸಿದರು. ಅಮೆರಿಕದ ವೀನಸ್ ವಿಲಿಯಮ್ಸ್ ಸಹ ಶುಭಾರಂಭ ಮಾಡಿದ್ದಾರೆ. 18ನೇ ಶ್ರೇಯಾಂಕ ಹೊಂದಿರುವ ವೀನಸ್ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನಿನ ಕಿಮಿಕೊ ಡಾಟೆ-ಕ್ರುಮ್ ವಿರುದ್ಧ 2-6, 6-3, 6-3 ಸೆಟ್ಗಳಿಂದ ಜಯ ಸಂಪಾದಿಸಿದರು. ಇಟಲಿಯ ರಾಬರ್ಟಾ ವಿನ್ಸಿ 6-3, 6-3, ನೇರ ಸೆಟ್ಗಳಿಂದ ಅರ್ಜೇಂಟೀನಾದ ಪೌಲಾ ಓರ್ಮಾಚಿಯಾಗೆ ಸೋಲುಣಿಸಿ ಎರಡನೇ ಸುತ್ತು ತಲುಪಿದರು.