ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೈನಾ ನೆಹ್ವಾಲ್ ಮೂರನೇ ಸುತ್ತಿಗೆ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡಿಂಟನ್ ..

Mainashree
Updated On : 27 Aug 2014, 10:44 am

ಕೂಪನ್‌ಹೆಗನ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿಗೆ ಪ್ರವೇಶಿದ್ದಾರೆ.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸೈನಾ, ದ್ವಿತೀಯ ಸುತ್ತಿನಲ್ಲಿ ರಷ್ಯಾದ ನತಾಲಿಯಾ ಪೆರ್ಮಿನೋವಾ ಅವರನ್ನು 21-11, 21-9 ಗೇಮ್‌ಗಳಿಂದ ಸುಲಭವಾಗಿ ಪರಾಭವಗೊಳಿಸಿದರು.

ಆದರೆ, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತದ ಪರುಪಳ್ಳಿ ಕಶ್ಯಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ವಿಶ್ವದ 27ನೇ ಶ್ರೇಯಾಂಕಿತ ಕಶ್ಯಪ್, ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಜರ್ಮನಿಯ ಡೀಟರ್ ಡಾಮ್ಕೆ ಅವರ ಎದುರು, 24-26, 21-13, 18-21 ಗೇಮ್‌ಗಳಿಂದ ಸೋಲನುಭವಿಸಿದರು. ಇದರೊಂದಿಗೆ ಜರ್ಮನಿಯ ಆಟಗಾರ ಏಳು ಬಾರಿಯ ಮುಖಾಮುಖಿಯಲ್ಲಿ ಕಶ್ಯಪ್ ವಿರುದ್ಧ ಸತತ ಎರಡನೇ ಗೆಲವು ದಾಖಲಿಸಿದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಮೊದಲ ಐದು ಬಾರಿಯ ಪೈಪೋಟಿಯಲ್ಲಿ ಡೀಟರ್ ಡಾಮ್ಕೆ ವಿರುದ್ಧ ಗೆಲುವು ಸಂಪಾದಿಸಿ ತಮ್ಮ ಪ್ರಭುತ್ವ ಮೆರೆದಿರುವು 27ರ ಕಶ್ಯಪ್‌ಗೆ ಇಲ್ಲಿ ಮಾತ್ರ ವಿಜಯದ ಕಹಳೆ ಮೊಳಗಿಸಲು ಸಾಧ್ಯವಾಗಲಿಲ್ಲ. ಈ ಮೊದಲು ಅಶ್ವಿನಿ ಪೊನ್ನಪ್ಪ ಮತ್ತು ತರುಣ್ ಕೋನಾ ಮಿಶ್ರ ಡಬಲ್ಸ್‌ನಲ್ಲಿ ತಮ್ಮ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಆಘಾತ ಅನುಭವಿಸಿದ್ದರು. ಆದರೆ, ಕಶ್ಯಪ್ ಮೇಲೆ ಅಪಾರ ನಂಬಿಕೆ ಇಡಲಾಗಿತ್ತು. ಕಶ್ಯಪ್ ಕೂಡ ಸೋಲನುಭವಿಸುವ ಮೂಲಕ ತವರಿಗೆ ಭಾರಿ ನಿರಾಸೆ ಉಂಟುಮಾಡಿತು.

ದಿವಾಲ್ಕರ್-ಪ್ರಣವ್ 2ನೇ ಸುತ್ತಿಗೆ:
ಆದರೆ, ಭಾರತದ ಮತ್ತಿಬ್ಬರು ಭರವಸೆಯ ಶಟ್ಲರ್‌ಗಳಾದ ಅಕ್ಷಯ್ ದಿವಾಲ್ಕರ್ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಪುರುಷರ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸುವ ಮೂಲಕ ತವರಿನ ಮಾನ ಉಳಿಸಿದ್ದಾರೆ.

ಅಕ್ಷಯ್ ಮತ್ತು ಪ್ರಣವ್ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಯನ್ ಲುಂಗ್ ಚಾನ್ ಮತ್ತು ಚುನ್ ಹೀ ಲೀ ವಿರುದ್ಧ 21-19, 21-16 ನೇರ ಅಂಕಗಳಿಂದ ಜಯಗಳಿಸಿದರು.

ಭಾರತದ ಜೋಡಿಗೆ ಎರಡನೇ ಸುತ್ತಿನ ಸಮರದಲ್ಲಿ ದಕ್ಷಣ ಕೊರಿಯಾದ ಐದನೇ ಶ್ರೇಯಾಂಕಿತ ಜೋಡಿ ಕಿ ಜುಂಗ್ ಕಿಮ್ ಮತ್ತು ಸಾ ರಂಗ್ ಕಿಮ್‌ರ ಸವಾಲು ಎದುರಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement