ಕುಸಿದ ರಾಕ್‌ಸ್ಟಾರ್ಸ್, ಯುನೈಟೆಡ್ ವಿಜಯ
ರಾಕ್‌ಸ್ಟಾರ್ರ್ಸ್ ತಂಡದ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯದ ಲಾಭ ಪಡೆದ ಮಂಗಳೂರು ಯುನೈಟೆಡ್ ತಂಡವು...
ಮೈಸೂರು: ರಾಕ್‌ಸ್ಟಾರ್ರ್ಸ್ ತಂಡದ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯದ ಲಾಭ ಪಡೆದ ಮಂಗಳೂರು ಯುನೈಟೆಡ್ ತಂಡವು, ಕೆಪಿಎಲ್ ಟಿ20 ಪಂದ್ಯಾವಳಿಯಲ್ಲಿ 7 ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿತು.
ನಗರದ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಕೆಎಸ್‌ಸಿಎ ಆಯೋಜಿಸಿರುವ ಕೆಪಿಎಸ್ 3ನೇ ಅವತ್ತಿಯ ಮೊದಲ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯುನೈಟ್‌ಡ್ ತಂಡ, ರಾಕ್‌ಸ್ಟಾರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿ ಕೇವಲ 117 ರನ್‌ಗಳಿಗೆ ಕಟ್ಟಿ ಹಾಕಿತು. ಉತ್ತರವಾಗಿ ಮಂಗಳೂರು ಯುನೈಟೆಡ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 118 ರನ್‌ಗಳಿಸಿ ಗುರಿ ಮುಟ್ಟಿತ್ತು.
ಸಂಕ್ಷಿಪ್ತ ಸ್ಕೋರ್
ರಾಕ್‌ಸ್ಟಾರ್ಸ್ 20 ಓವರುಗಳಲ್ಲಿ 7 ವಿಕೆಟ್‌ಗೆ 117
ರಾಜೀವ್ 35, ಪ್ರದೀಪ್ 44, ಧ್ರುವ ಶರ್ಮಾ 22, ಉದಿತ್ ಪಟೇಲ್ 25ಕ್ಕೇ3, ಮಿತ್ರಕಾಂತ್ ಸಿಂಗ್ 12ಕ್ಕೇ2.
ಮಂಗಳೂರು ಯುನೈಟೆಡ್ 18.1 ಓವರುಗಳಲ್ಲಿ 3 ವಿಕೆಟ್‌ಗೆ 118
ರೋಹಿತ್ ಶಬರ್‌ವಾಲ್ 11, ಕರುಣ್ ನಾಯರ್ 46, ಗಣೇಶ್ ಸತೀಶ್ 27, ಪವನ್ ದೇಶಪಾಂಡೆ ಅಜೇಯ 24, ವಿಕ್ರಾಂತ್ 19ಕ್ಕೇ2