ಜೋಕೊವಿಚ್, ಸೆರೆನಾಗೆ ಜಯ
ನ್ಯೂಯಾರ್ಕ್: ಎದುರಾಳಿಯ ವಿರುದ್ಧ ತಮ್ಮ ಪ್ರಭುತ್ವ ಸಾಧಿಸುವ ಮೂಲಕ ವರ್ಷದ ಕಡೆಯ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿಯಲು ನಂಬರ್ ಒನ್ ಆಟಗಾರರು ಕಾತರರಾಗಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ನೊವಾಕ್ ಜೋಕೊವಿಕ್ ಮತ್ತು ಮಹಿಳೆಯರ ಸಿಂಗಲ್ನಲ್ಲಿ ಸೆರೆನಾ ವಿಲಿಯಮ್ಸ್ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ಶನಿವಾರ ತಡರಾತ್ರಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಈ ಇಬ್ಬರು ತಮ್ಮ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ನೋವಾಕ್ ಜೋಕೊವಿಚ್ ತಮ್ಮ ಎದುರಾಳಿ ಅಮೆರಿಕದ ಸ್ಯಾಮ್ ಕ್ಯೂರೆ ವಿರುದ್ಧ 6-3, 6-2, 6-2 ನೇರ ಸೆಟ್ಗಳ ಸುಲಭ ಗೆಲುವು ದಾಖಲಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ತಮ್ಮ ಎದುರಾಳಿ ಅಮೆರಿಕಾದ ವರ್ವರಾ ಲೆಪ್ಟೆಂಕೊ ವಿರುದ್ಧ 6-3, 6-3 ನೇರ ಸೆಟ್ಗಳ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ತಮ್ಮ ಎದುರಾಳಿ ಸರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ವಿರುದ್ಧ 4-6, 4-6 ಸೆಟ್ಗಳ ಅಂತರದ ಅಚ್ಚರಿಯ ಸೋಲು ಅನುಭವಿಸಿದರು.