ಕ್ರೀಡೆ

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯ ಶೀಘ್ರ ಅಂತ್ಯ?

ಭಾರತದ ಟೆನಿಸ್ ತಾರೆ ಸಾನಿಯಾ...

ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜೋಡಿ ಶೀಘ್ರದಲ್ಲೇ ಮುರಿದುಬೀಳುವ ಲಕ್ಷಣಗಳು ಗೋಚರಿಸಿವೆ. ಸಾನಿಯಾ ಮಿರ್ಜಾ ಅವರನಡೆ, ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ಚಟುವಟಿಕೆಗಳು ಈ ಮಾತನ್ನು ಪುಷ್ಟೀಕರಿಸಿವೆ.

ಏನು ಕಾರಣ?
ಇತ್ತೀಚೆಗೆ ಸಾನಿಯಾ ಮೀರ್ಜಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿದ್ದ ಅವರಿಬ್ಬರ ಜೋಡಿ ಚಿತ್ರಗಳನ್ನು ಕಿತ್ತುಹಾಕಿರುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದೆ. ಕೆಲವಾರು ದಿನಗಳ ಹಿಂದೆ, ಶೋಯೆಬ್ ಜೊತೆಗಿನ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಸಾನಿಯಾ ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವುಗಳನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಶೋಯೆಬ್ ಅವರನ್ನು ಕೇಳಿದರೆ, 'ಈ ಪ್ರಶ್ನೆಯನ್ನು ಸಾನಿಯಾ ಅವರಿಗೇ ಕೇಳಿ' ಎಂದಿದ್ದಾರೆ.

ಅಷ್ಟೇ ಅಲ್ಲ, ಇತ್ತೀಚೆಗೆ, ಬಕ್ರೀದ್ ಹಬ್ಬವನ್ನು ಅವರು ಶೋಯೆಬ್ ಜೊತೆ ಆಚರಿಸಲೇ ಇಲ್ಲ. ಹಬ್ಬದ ದಿನ ಅವರು ಹೈದ್ರಾಬಾದ್‌ನ ತಮ್ಮ ಮನೆಯಲ್ಲಿದ್ದರೆ, ಅತ್ತ, ಶೋಯೆಬ್ ತಮ್ಮ ತಾಯಿ ಜೊತೆ ಸಿಯಾಲ್ಕೊಟ್‌ನಲ್ಲೇ ಹಬ್ಬ ಆಚರಿಸಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಸಾನಿಯಾ-ಶೋಯೆಬ್ ನಡುವಿನ ಬಿರುಕನ್ನು ತೋರಿಸುತ್ತಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!