ಭುವನೇಶ್ವರ: ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ.
ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಒಂದು ಗೋಲು ಹೊಡೆಯಲು ಸಾಧ್ಯವಾಗಿಲ್ಲ. ಜರ್ಮನಿ ಎರಡು ಗೋಲು ಹೊಡೆಯುವ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದೆ.
ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡವನ್ನು 4-3ರಿಂದ ಮಣಿಸುವ ಮೂಲಕ ಮೈದಾನದಲ್ಲಿ ತಮ್ಮ ತಮ್ಮ ಶರ್ಟ್‌ಗಳ್ನು ಬಿಚ್ಚಿ ಪ್ರೇಕ್ಷಕರತ್ತ ಅಸಭ್ಯ ಚಿಹ್ನೆಗಳನ್ನು ತೋರಿಸುತ್ತಾ ದುರ್ವರ್ತನೆ ತೋರಿದ್ದರು.
ಇಂದು ಜರ್ಮನಿ ವಿರುದ್ಧ ಸೋಲುವುದರ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಗೋಲ್ಸ್
ಜರ್ಮನಿ - 2
ಪಾಕಿಸ್ತಾನ - 0