ಕ್ರೀಡೆ

'ಪಾಕಿಸ್ತಾನದ ಜೊತೆ ಆಡಲ್ಲ': ಭಾರತ ಹಾಕಿ ಸಂಸ್ಥೆಯ ಕಠಿಣ ನಿರ್ಧಾರ

Srinivasamurthy VN

ನವದೆಹಲಿ: ಭಾರತ ಇನ್ನು ಮುಂದೆ ಪಾಕಿಸ್ತಾನ ಹಾಕಿ ತಂಡದೊಂದಿಗೆ ಪಂದ್ಯಗಳನ್ನು ಆಡುವುದಿಲ್ಲ ಎಂದು ಭಾರತ ಹಾಕಿ ಫೆಡರೇಷನ್ ಹೇಳಿದೆ.

ನಿನ್ನೆ ಒಡಿಶಾದ ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡವನ್ನು 4-3ರಿಂದ ಮಣಿಸಿದ್ದ ಪಾಕಿಸ್ತಾನ ಆಟಗಾರರು ಗೆಲುವು ಖಾತರಿಯಾಗುತ್ತಿದ್ದಂತೆಯೇ ಮೈದಾನದಲ್ಲಿಯೇ ತಮ್ಮ ತಮ್ಮ ಶರ್ಟ್‌ಗಳನ್ನು ಬಿಚ್ಚಿ ಪ್ರೇಕ್ಷಕರತ್ತ ಅಸಭ್ಯ ಚಿಹ್ನೆಗಳನ್ನು ಮಾಡುತ್ತ ದುರ್ವರ್ತನೆ ತೋರಿದ್ದರು. ಹೀಗಾಗಿ ಆಟಗಾರರ ವರ್ತನೆಯಿಂದ ಕುಪಿತಗೊಂಡಿರುವ ಭಾರತ ಹಾಕಿ ಫೆಡರೇಷನ್ ಸಂಸ್ಥೆ ತಾನು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

'ಮೈದಾನದಲ್ಲಿ ಪಾಕ್ ಆಟಗಾರರು ಮೀತಿಮೀರಿ ವರ್ತಿಸಿದ್ದು, ಪ್ರೇಕ್ಷಕರತ್ತ ಅಸಭ್ಯ ವರ್ತನೆ ತೋರಿದ್ದಾರೆ. ಹೀಗಾಗಿ ಪಾಕಿಸ್ತಾನ ಹಾಕಿ ಫೆಡರೇಷನ್ ಮತ್ತು ಪಾಕಿಸ್ತಾನ ಹಾಕಿ ತಂಡದ ಆಟಗಾರರು ಭಾರತದ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ತಾವು ಪಾಕಿಸ್ತಾನದೊಂದಿಗೆ ಭವಿಷ್ಯದಲ್ಲಿ ಇನ್ನು ಯಾವುದೇ ರೀತಿಯ ಸರಣಿಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ಹಾಕಿ ಫೆಡರೇಷನ್ ಸ್ಪಷ್ಟಪಡಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ, ಮೈದಾನದಲ್ಲಿ ಪಾಕ್ ಆಟಗಾರರು ಸಂಭ್ರಮಾಚರಣೆ ಮಾತ್ರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಸಭ್ಯವರ್ತನೆ ಕಂಡುಬಂದಿಲ್ಲ ಎಂದು ಹೇಳುವ ಮೂಲಕ ಭಾರತ ಹಾಕಿ ಫೆಡರೇಷನ್ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಪಾಕ್ ಆಟಗಾರರ ವರ್ತನೆ ಕುರಿತಂತೆ ಸಾಕ್ಷ್ಯ ಸಮೇತ ದೂರು ನೀಡಲು ಭಾರತ ಹಾಕಿ ಸಂಸ್ಥೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಹಾಕಿ ತಂಡದ ಕೋಚ್ ಕ್ಷಮೆ ಯಾಚನೆ
ಇನ್ನು ಮೈದಾನದಲ್ಲಿ ಪಾಕಿಸ್ತಾನ ಆಟಗಾರರು ತೋರಿದು ದುರ್ವರ್ತನೆ ಕುರಿತಂತೆ ಕೋಚ್ ಶಹನಾಜ್ ಅವರು ಮಾಧ್ಯಮಗಳಲ್ಲಿ ಕ್ಷಮೆಯಾಚಿಸಿದ್ದು, ಭವಿಷ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಶಹನಾಜ್ ಹಾಕಿ ಇಂಡಿಯಾಗೆ ಪತ್ರ ಬರೆದಿದ್ದಾರೆ.

SCROLL FOR NEXT