ವಿಶ್ವನಾಥನ್ ಆನಂದ್ 
ಕ್ರೀಡೆ

ಇಷ್ಟು ಬೇಗ ನಿವೃತ್ತಿ ಇಲ್ಲ: ವಿಶ್ವನಾಥನ್ ಆನಂದ್

5 ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದ ವಿಶ್ವನಾಥನ್ ಆನಂದ್, ತಾನು ಇನ್ನಷ್ಟು ಪಂದ್ಯವನ್ನಾಡಲು ಇಚ್ಛಿಸುತ್ತಿದ್ದು...

ಹೈದ್ರಾಬಾದ್: 5 ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದ ವಿಶ್ವನಾಥನ್ ಆನಂದ್, ತಾನು ಇನ್ನಷ್ಟು ಪಂದ್ಯವನ್ನಾಡಲು ಇಚ್ಛಿಸುತ್ತಿದ್ದು, ಇಷ್ಟು ಬೇಗ ನಿವೃತ್ತನಾಗುವುದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್‌ರಲ್ಲಿ ನಿಮ್ಮ ಉತ್ತಮ ಪ್ರದರ್ಶನ ಇನ್ಮುಂದೆ ಬರಲಿದೆಯೇ? ಎಂದು ಕೇಳಿದಾಗ, ನಾನು ಅದನ್ನೇ ನಿರೀಕ್ಷಿಸುತ್ತಿದ್ದೇನೆ, ನಾನು ಆಶಾವಾದಿಯಾಗಿರಲು ಯತ್ನಿಸುತ್ತೇನೆ.

ಪ್ರಸಕ್ತ ವರ್ಷದಲ್ಲಿ ನನ್ನ ಪ್ರದರ್ಶನದ ಬಗ್ಗೆ ನನಗೆ ತೃಪ್ತಿಯಿದೆ. ಹಲವಾರು ಪಂದ್ಯಗಳಲ್ಲಿ ನಾನು ಚೆನ್ನಾಗಿಯೇ ಆಡಿದೆ. ಮೂರು ಪಂದ್ಯಗಳನ್ನು ನಾನು ಗೆದ್ದುಕೊಂಡೆ. ಮುಂದೆಯೂ ಇದೇ ರೀತಿ ಮುಂದುವರಿಯಲು ನಾನು ಬಯಸುತ್ತೇನೆ ಎಂದು ನುಡಿದಿದ್ದಾರೆ.

ಆದಾಗ್ಯೂ, ವಿಶ್ವ ಚಾಂಪಿಯನ್ ಪಂದ್ಯದಲ್ಲಿ ಮಾಗ್ಸನ್ ಕಾರ್ಲಸನ್ ವಿರುದ್ಧ ಪರಾಭವ ಅನುಭವಿಸಿದರ ಬಗ್ಗೆ ಮಾತನಾಡಿದ ಆನಂದ್, ನಾನು ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಂಡೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ವಿಫಲನಾದೆ ಎಂದು ಹೇಳಿದ್ದಾರೆ.

ನೀವು ಕೋಚಿಂಗ್ ನೀಡಲು ಆಸಕ್ತಿ ವಹಿಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗ್ರಾಂಡ್ ಮಾಸ್ಟರ್, ಈ ಬಗ್ಗೆ ನಾನು ಯೋಚಿಸಿಯೇ ಇಲ್ಲ. ಇನ್ನು ಮುಂದೆಯೂ ಹೆಚ್ಚು ಹೆಚ್ಚು ಆಟಗಳನ್ನು ಆಡಲು ನಾನು ಬಯಸಿದ್ದು, ಅದರತ್ತ ಹೆಚ್ಚು ಗಮನ ಹರಿಸುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT