ಮಹೇಂದ್ರ ಸಿಂಗ್ ಧೋನಿ 
ಕ್ರೀಡೆ

ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಗೊಂದಲ ಬ್ರಿಸ್ಬೇನ್ ಟೆಸ್ಟ್ ಸೋಲಿಗೆ ಕಾರಣ?

ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಪರಾಭವಗೊಂಡ ಬೆನ್ನಲ್ಲೇ ಹೊಸ ವಿವಾದವೊಂದು...

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಪರಾಭವಗೊಂಡ ಬೆನ್ನಲ್ಲೇ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.

ನಾಲ್ಕನೇ ದಿನದಾರಂಭದ ಪಂದ್ಯದಲ್ಲಿ ಗಾಯಗೊಂಡ ಶಿಖರ್ ಧವನ್ ಬದಲು ವಿರಾಟ್ ಕೊಹ್ಲಿಯನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದು ಹಾಗೂ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಗೊಂದಲ ಈಗ ವಿವಾದಕ್ಕೀಡಾಗಿದೆ.

ಪ್ರಸ್ತುತ ಪಂದ್ಯ ಆರಂಭವಾಗುವ ಏಳು ನಿಮಿಷಗಳಿಗೆ ಮುಂಚೆಯಷ್ಟೇ ಪುಜಾರಾ ಜತೆ ಬ್ಯಾಟಿಂಗ್‌ಗೆ ಇಳಿಯಬೇಕೆಂದು ಕ್ಯಾಪ್ಟನ್ ಧೋನಿ, ವಿರಾಟ್ ಕೊಹ್ಲಿಗೆ ಹೇಳಿದ್ದರು. ಪಂದ್ಯದ ಮುನ್ನಾದಿನ ತರಬೇತಿ ನಡೆಸುತ್ತಿದ್ದಾಗ ಧವನ್ ಕೈಗೆ ಏಟಾಗಿತ್ತು.

ಮೂರನೇ ದಿನದ ಪಂದ್ಯ ಅಂತ್ಯಗೊಂಡಾದ ಧವನ್ ಮತ್ತು ಪೂಜಾರಾ ಕ್ರೀಸ್‌ನಲ್ಲಿದ್ದರು. ಧವನ್ ಗಾಯದ ಕಾರಣ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಬೇಕಾಗಿ ಬಂದಿತ್ತು.  

ಧವನ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸುವುದೋ ಬೇಡವೋ, ಅವರು ಬ್ಯಾಟ್ ಮಾಡಲು ಫಿಟ್ ಆಗಿದ್ದಾರೆಯೇ? ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲೂ ಸಮಯ ಹಿಡಿಯಿತು. ಈ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ಗೊಂದಲವೂ ಸೃಷ್ಟಿಯಾಗಿದೆ. ಅನಂತರ ಧವನ್ ಬದಲು ಕೊಹ್ಲಿಯನ್ನು ಬ್ಯಾಟಿಂಗ್ ಮಾಡಲು ಕಳುಹಿಸಿದೆವು. ನಾಲ್ಕನೇ ದಿನ ಪುಜಾರಾ ಜತೆ ಬ್ಯಾಟಿಂಗ್‌ಗಿಳಿದ ಕೊಹ್ಲಿ 1 ರನ್ ಗಳಿಸಿ ಔಟಾಗಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ದಿಢೀರ್ ನಿರ್ಧಾರ ಕೈಗೊಂಡಿರುವುದರಿಂದ ಕೊಹ್ಲಿಗೆ ಸಿದ್ಧತೆ ನಡೆಸಲು ಸಮಯ ಸಿಕ್ಕಿಲ್ಲ. ಶಿಖರ್ ಧವನ್ ಗಾಯ ನಂತರ ಏಳು ನಿಮಿಷಗಳೆಡೆಯಲ್ಲಿ ಕೊಹ್ಲಿಯನ್ನು ಬ್ಯಾಟಿಂಗ್‌ಗೆ ಕಳಿಸಿದ್ದು ಇವೆಲ್ಲ ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರಿದೆ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಈ ಟೆಸ್ಟ್‌ನಲ್ಲಿ 128 ರನ್‌ಗಳ ಗುರಿಯನ್ನು ಬೆನ್ನತ್ತಿ ಬ್ಯಾಟಿಂಗ್ ಗಿಳಿದ ಆಸ್ಟ್ರೇಲಿಯಾ ತಂಡ 6 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸುವ ಮೂಲಕ ಭಾರತವನ್ನು 4 ವಿಕೆಟ್‌ಗೆ ಪರಾಭವಗೊಳಿಸಿತ್ತು.

ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಸತತ ಎರಡನೇ ಬಾರಿ ಸೋಲು ಅನುಭವಿಸಿದೆ. ಸೋಲಿನ ಬಗ್ಗೆ ಮಾತನಾಡಿದ ಧೋನಿ, ಸೋಲು ಸಹಜ ಆದರೆ ಸೊಲಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ ಆ ಬಗ್ಗೆ ಗಮನ ಹರಿಸುವುದೊಳಿತು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ