ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯೂಸಫ್ ಪಠಾಣ್ ನಿಂದ ಪ್ರೇಕ್ಷಕನಿಗೆ ಕಪಾಳಮೋಕ್ಷ!

ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡಾ ಮತ್ತು ಜಮ್ಮು ಕಾಶ್ಮೀರ ಮಧ್ಯೆ ಮ್ಯಾಚ್ ನಡೆಯುತ್ತಿದ್ದಾಗ ಅಲ್ಲಿನ ಪ್ರೇಕ್ಷಕರೊಬ್ಬರು ...

ಯೂಸಫ್ ಪಠಾಣ್ (ಸಂಗ್ರಹ ಚಿತ್ರ)
Rashmi Kasaragodu
Updated On : 24 Dec 2014, 3:14 am

ವಡೋದರ: ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡಾ ಮತ್ತು ಜಮ್ಮು ಕಾಶ್ಮೀರ ಮಧ್ಯೆ ಮ್ಯಾಚ್ ನಡೆಯುತ್ತಿದ್ದಾಗ ಅಲ್ಲಿನ ಪ್ರೇಕ್ಷಕರೊಬ್ಬರು ರೇಗಿಸಿದ್ದಕ್ಕೆ ಸಿಟ್ಟುಗೊಂಡ ಯೂಸಫ್ ಪಠಾಣ್ ಆ ಪ್ರೇಕ್ಷಕನಿಗೆ ಕಪಾಳಮೋಕ್ಷ ಮಾಡಿರುವುದರ ಬಗ್ಗೆ ವರದಿಯಾಗಿದೆ.

ಮಂಗಳವಾರ ಇಲ್ಲಿನ ರಿಲಯನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಪಠಾಣ್ ಬ್ಯಾಟಿಂಗ್ ಮಾಡುತ್ತಿದಾಗ ಅಲ್ಲೇ ಇದ್ದ ಯುವ ಪ್ರೇಕ್ಷಕನೊಬ್ಬ ಪಠಾಣ್‌ಗೆ ಬೈದಿದ್ದಾನೆ.

ಮ್ಯಾಚ್ ನಡೆಯುತ್ತಿದ್ದಾಗ ಆ ಪ್ರೇಕ್ಷಕ ಪಠಾಣ್ ಸೇರಿದಂತೆ ಇನ್ನಿತರ ಕ್ರಿಕೆಟರ್‌ಗಳ ವಿರುದ್ಧ ಅವಾಚ್ಯ ಪದ ಪ್ರಯೋಗ ಮಾಡಿದ್ದಾನೆ. ಇದನ್ನು ಪಠಾಣ್‌ಗೆ ಸಹಿಸಿಕೊಳ್ಳಲು ಆಗಿಲ್ಲ. ಆದಾಗ್ಯೂ, ಔಟ್ ಆದ ನಂತರ ಆ ಯುವಕನ್ನು ಡ್ರೆಸ್ಸಿಂಗ್ ರೂಂಗೆ ಕರೆದ ಪಠಾಣ್ ಆತನ ಕೆನ್ನೆಗೆ ಎರಡು ಬಾರಿ ಬಾರಿಸಿದ್ದಾರೆ ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಕಾರ್ಯದರ್ಶಿ ಸ್ನೇಹಾಲ್ ಪರೀಖ್ ಹೇಳಿದ್ದಾರೆ.

ಯೂಸಫ್ ಪಠಾಣ್ ಸಿಟ್ಟಾಗಿರುವ ವಿಷಯ ಆತನ ತಮ್ಮ ಇರ್ಫಾನ್ ಪಠಾಣ್‌ಗೆ ಗೊತ್ತಾದ ಕೂಡಲೇ ಆತ ಡ್ರೆಸ್ಸಿಂಗ್ ರೂಂಗೆ ಬಂದು ಅಲ್ಲಿನ ಪರಿಸ್ಥಿತಿಯನ್ನು ಸಂಭಾಳಿಸಿದ್ದಾನೆ ಎಂದು ಪರೀಖ್ ಹೇಳಿದ್ದಾರೆ.

ಅದೇ ವೇಳೆ ಪಠಾಣ್‌ನಿಂದ ಕಪಾಳಮೋಕ್ಷಕ್ಕೊಳಗಾದ ಯುವಕನ ಮನೆಯವರು ಕ್ಷಮೆ ಕೋರಿದ್ದು, ಈ ಪ್ರಕರಣ ಇತ್ಯರ್ಥಗೊಂಡಿದೆ ಎಂದು ಬಿಸಿಎ ಕಾರ್ಯದರ್ಶಿ ಅಂಶುಮನ್ ಗಾಯೆಕ್ವಾಡ್ ಹೇಳಿದ್ದಾರೆ.

ಪಠಾಣ್ ವಿರುದ್ಧ ಕ್ರಮ: ಪ್ರಸ್ತುತ ಘಟನೆಯ ಬಗ್ಗೆ ಮ್ಯಾಚ್ ರೆಫ್ರೀ ಪ್ರಶಾಂತ ಮೊಹಾಪಾತ್ರ ಬಿಸಿಸಿಐಗೆ ವರದಿ ನೀಡಿದ್ದಾರೆ. ಪ್ರೇಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಪಠಾಣ್ ದಂಡ ತೆರಬೇಕಾಗಿ ಬರಬಹುದು ಮತ್ತು ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement