ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್: ಟೆಸ್ಟ್ ಕ್ರಿಕೆಟ್‌ಗೆ ಕರ್ನಾಟಕದ ರಾಹುಲ್ ಪಾದಾರ್ಪಣೆ

ಕರ್ನಾಟಕದ ಯುವ ಬ್ಯಾಟ್ಸ್‌ಮೆನ್ ಮಂಗಳೂರು ಮೂಲದ ಕೆ. ಎಲ್ ರಾಹುಲ್ ಅವರು ಇಂದು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ...

ರಾಹುಲ್ ಅವರಿಗೆ ಧೋನಿ ಟೆಸ್ಟ್ ಕ್ಯಾಪ್ ತೊಡಿಸುತ್ತಿರುವುದು (ಕೃಪೆ : ಟ್ವೀಟರ್)
Rashmi Kasaragodu
Updated On : 26 Dec 2014, 11:46 am

ಮೆಲ್ಬರ್ನ್: ಕರ್ನಾಟಕದ ಯುವ ಬ್ಯಾಟ್ಸ್‌ಮೆನ್ ಮಂಗಳೂರು ಮೂಲದ ಕೆ. ಎಲ್ ರಾಹುಲ್ ಅವರು ಇಂದು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

22ರ ಹರೆಯದ ರಾಹುಲ್ ಬಲಗೈ ದಾಂಡಿಗನಾಗಿದ್ದು, ಭಾರತದ 284ನೇ ಟೆಸ್ಟ್ ಆಟಗಾರರಾಗಿದ್ದಾರೆ. ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ.

ಪಂದ್ಯ ಆರಂಭಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ  ರಾಹುಲ್ ಅವರಿಗೆ ಟೆಸ್ಟ್ ಕ್ಯಾಪ್ ತೊಡಿಸುವ ಮೂಲಕ ಶುಭ ಕೋರಿದರು. ತಂಡದಲ್ಲಿ ರೋಹಿತ್ ಶರ್ಮಾ ಅವರ ಬದಲಿಗೆ ರಾಹುಲ್‌ಗೆ ಸ್ಥಾನ ನೀಡಲಾಗಿದೆ. 11 ನೇ ವಯಸ್ಸಿನಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ರಾಹುಲ್, ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2013-14 ರಣಜಿ ಟ್ರೋಫಿಯಲ್ಲಿ 1,158 ರನ್‌ಗಳನ್ನು ಕಲೆ ಹಾಕಿದ್ದ ರಾಹುಲ್, ಕರ್ನಾಟಕದ ಗೆಲುವಿನ ರೂವಾರಿಯಾಗಿದ್ದರು.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement