ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಟಿಪಿ ಟೆನಿಸ್: ಹೊರಬಿದ್ದ ಸನಮ್

Rashmi Kasaragodu
Updated On : 18 Feb 2014, 1:23 am

ನವದೆಹಲಿ: ಸ್ವಯಂಕೃತ ತಪ್ಪುಗಳಿಂದ ಬೆಲೆತೆತ್ತ ಭಾರತದ ಟೆನಿಸ್ ಆಟಗಾರ ಸನಮ್ ಸಿಂಗ್, ಒಎನ್ಜಿಸಿ-ಜಿಎಐಎಲ್ ದೆಹಲಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದ್ದಾರೆ. ಸೋಮವಾರ ಆರ್.ಕೆ ಖನ್ನಾ ಟೆನಿಸ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯಾವಳಿಯಲ್ಲಿ ಸನಮ್ ವೈಲ್ಡ್ ಕಾರ್ಡ್ನಿಂದ ಪ್ರವೇಶ ಪಡೆದಿದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಉಕ್ರೇನ್ನ ಇಲಿಯಾ ಮೊರ್ಚೆಂಕೊ ವಿರುದ್ಧ 2-6, 6-3, 4-6 ಸೆಟ್ಗಳ ಅಂತರದಲ್ಲಿ ಪರಾಭವಗೊಂಡರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಸನಮ್ ಸಿಂಗ್ ಆರಂಭದಲ್ಲೇ ಹಿನ್ನಡೆ ಅನುಭವಿಸಿದರು. ಪರಿಣಾಮ ಮೊದಲ ಸೆಟ್ನಲ್ಲಿ 2-6 ಅಂತರದಿಂದ ಎದುರಾಳಿಗೆ ಮುನ್ನಡೆ ಬಿಟ್ಟುಕೊಟ್ಟರು. ಇನ್ನು ಎರಡನೇ ಸೆಟ್ನಲ್ಲಿ ಹೋರಾಟ ನಡೆಸಿದ ಸನಮ್ ಸಿಂಗ್ 6-3 ಅಂತರದಿಂದ ಮುನ್ನಡೆ ಪಡೆದರು. ಅಲ್ಲದೆ ಪಂದ್ಯದಲ್ಲಿ ಸಮಬಲ ಸಾಧಿಸಿದರು. ಆದರೆ ಅಂತಿಮ ಸೆಟ್ನಲ್ಲಿ ಮತ್ತೆ ಕೆಲವು ತಪ್ಪುಗಳನ್ನು ಎಸಗಿದ ಸನಮ್ ಸಿಂಗ್, ನಿಯಂತ್ರಣ ಕಳೆದುಕೊಂಡರು ಪರಿಣಾಮ 4-6 ಅಂತರದಲ್ಲಿ ಹಿನ್ನಡೆ ಅನುಭವಿಸಿದರಲ್ಲದೇ ಪಂದ್ಯದಲ್ಲಿ ಮುಖಭಂಗ ಅನುಭವಿಸಿದರು.
ನಿಧಾನಗತಿಯಲ್ಲಿ ಪಂದ್ಯವನ್ನು ಆರಂಭಿಸಿದೆ. ಅಲ್ಲದೆ ಹೆಚ್ಚಿನ ತಪ್ಪುಗಳನ್ನು ಎಸಗಿದ್ದು, ಪಂದ್ಯದಲ್ಲಿ ಸೋಲಿಗೆ ಕಾರಣವಾಯಿತು. ಎರಡನೇ ಸೆಟ್ನಲ್ಲಿ ನಿಯಂತ್ರಣ ಕಂಡುಕೊಂಡೆ. ಮೂರನೇ ಸೆಟ್ನಲ್ಲಿ ತೀವ್ರ ಪೈಪೋಟಿ ಇತ್ತಾದರೂ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸನಮ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕೋರ್ಟ್ ಮಂದಗತಿಯಲ್ಲಿತ್ತು. ನೀವು ಹೆಚ್ಚಿನ ಚುರುಕುತನ ಪ್ರದರ್ಶಿಸಿದರೂ ಸಾಧ್ಯವಾಗಲಿಲ್ಲ. ಎದುರಾಳಿ ಆಟಗಾರರು ಉತ್ತಮ ವೇಗದ ಹೊಡೆತ ಪ್ರಯೋಗಿಸಿದರು. ಆದರೂ ನನ್ನ ಕೆಟ್ಟ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣ.
ಉದಯೋನ್ಮುಖ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ 2-6, 1-6 ಸೆಟ್ಗಳ ಅಂತರದಿಂದ ಎದುರಾಳಿ ಬ್ರಿಟನ್ನ ಡೇನಿಯಲ್ ಕಾಕ್ಸ್ ವಿರುದ್ಧ ಸೋಲನುಭವಿಸಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ವೈಲ್ಡ್ಕಾರ್ಡ್ ಪಡೆದಿದ್ದ ಇಬ್ಬರು ಆಟಗಾರ್ತಿಯರಾದ ನಿಧಿ, ಶ್ವೇತಾ ರಾಣಾ ಹಾಗೂ ಪ್ರೇರಣ ಭಾಂಬ್ರಿ ತಮ್ಮ ಪಂದ್ಯಗಳಲ್ಲಿ ಪರಾಭವಗೊಂಡಿದ್ದಾರೆ. ನಿಧಿ ತಮ್ಮ ಎದುರಾಳಿ ಥೈಲೆಂಡ್ನ ಪೆಂಗ್ತಮ್ ಪ್ಲುಪೆಚ್ ವಿರುದ್ಧ 3-6, 2-6 ನೇರ ಸೆಟ್ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಇನ್ನು ಶ್ವೇತಾ 2-6, 0-6 ನೇರ ಸೆಟ್ಗಳ ಅಂತರದಲ್ಲಿ ಚೈನೀಸ್ನ ಕ್ವೈಂಗ್ ವಾಂಗ್ ವಿರುದ್ಧ ಮಣಿದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement