ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುಲ್ದೀಪ್ ಹ್ಯಾಟ್ರಿಕ್, ಭಾರತಕ್ಕೆ ಜಯ

Rashmi Kasaragodu
Updated On : 18 Feb 2014, 1:26 am

ಅಬುಧಾಬಿ: ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಹ್ಯಾಟ್ರಿಕ್ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ, 19 ವರ್ಷದೊಳಗಿನ ಕಿರಿಯರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಗೆಲವು ದಾಖಲಿಸಿದೆ.
ಸೋಮವಾರ ನಡೆದ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್ಗಳ ಗೆಲವು ದಾಖಲಿಸಿದೆ. ಈ ಮೂಲಕ ಭಾರತ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲವು ದಾಖಲಿಸಿದೆ. ಈ ಮೂಲಕ ಭಾರತ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದು, ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಸ್ಕಾಟ್ಲೆಂಡ್ ತಂಡ 29.4 ಓವರ್ಗಳಲ್ಲಿ 88 ರನ್ಗಳಿಗೆ ಆಲೌಟ್ ಆಗುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ 22.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 92 ರನ್ ದಾಖಲಿಸಿ ಗೆಲವಿನ ನಗೆ ಬೀರಿತು.
ಕಾಡಿದ ಕುಲ್ದೀಪ್: ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಕಾಡಿದ ಭಾರತದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಹಾಗೂ ಅಮಿರ್ ಗನಿ ಭಾರತ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕಾಟ್ಲೆಂಡ್ ತಂಡದ ಪರ ಆ್ಯಂಡ್ರೂ ಉಮೀದ್(44) ಹಾಗೂ ಗೆವಿನ್ ಮೈನ್(16) ಹೊರತು ಪಡಿಸಿ, ಉಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ರನ್ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ 28 ರನ್ಗಳಿಗೆ 4 ವಿಕೆಟ್ ಕಬಳಿಸಿದರೆ, ಅಮಿರ್ ಗನಿ 28 ರನ್ಗಳಿಗೆ 4 ವಿಕೆಟ್ ಪಡೆದು ಸ್ಕಾಟ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಕಂಟಕಪ್ರಾಯವಾದರು. ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. 18.5ನೇ ಓವರ್ನಲ್ಲಿ ನಿಕ್ ಫರ್ರಾರ್, ಕುಲ್ದೀಪ್ ಎಸೆತದಲ್ಲಿ ದೀಪಕ್ ಹೂಡಾಗೆ ಕ್ಯಾಚ್ ನೀಡಿದರು. 18.6ನೇ ಓವರ್ನಲ್ಲಿ ಕೈಲ್ ಸ್ಟ್ರೀಲ್ಲಿಂಗ್, ಕುಲ್ದೀಪ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ 20.1ನೇ ಓವರ್ನಲ್ಲಿ ಅಲೆಕ್ಸ್ ಬೌಮಾ, ಕುಲ್ದೀಪ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪತನವಾಯಿತು.
ಪರದಾಡಿದ ಭಾರತ: ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಭಾರತ ತಂಡಕ್ಕೆ ಸ್ಕಾಟ್ಲೆಂಡ್ ನೀಡಿದ ಮೊತ್ತ ಅಲ್ಪ ಎಂದು ಎಲ್ಲರು ಭಾವಿಸಿದ್ದರು. ಈ ಮೊತ್ತವನ್ನು ಭಾರತ ಒಂದೆರಡು ವಿಕೆಟ್ಗಳಿಗೆ ಹೊಡೆದು ಗೆಲವು ದಾಖಲಿಸಿಲಿದೆ ಎಂದು ಭಾವಿಸಿದ್ದರು. ಆದರೆ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಭಾರತ ತಂಡ ಆರಂಭದಲ್ಲೇ ಪ್ರಮುಖ ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಒತ್ತಡಕ್ಕೆ ಸಿಲುಕಿತು. ನಂತರ ಸರ್ಫರಾಜ್ ಖಾನ್(ಅಜೇಯ 45) ಹಾಗೂ ದೀಪಕ್ ಹೂಡ(ಅಜೇಯ 24) ಅವರ ಅರ್ಧಶತಕದ ಜತೆಯಾಟದ ನೆರವಿನಿಂದ ಭಾರತವನ್ನು ಗೆಲವಿನ ದಡ ಸೇರಿಸಿದರು. ಹ್ಯಾಟ್ರಿಕ್ ಪಡೆದು ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


ಸ್ಕೋರ್ ವಿವರ


ಸ್ಕಾಟ್ಲೆಂಡ್ 29.4 ಓವರ್ಗಳಲ್ಲಿ 88
ಆ್ಯಂಡ್ರೂ ಉಮೀದ್ ಬಿ ಗನಿ     44(77)
ರಾಸ್ ಮೆಕ್ಲೀನ್ ಸಿ ಗನಿ ಬಿ ಮಿಲಿಂದ್     7(15)
ಮೈಕೆಲ್ ಇಂಗ್ಲೀಷ್ ಬಿ ಆವೇಶ್ ಖಾನ್     1(5)
ಜಾಂಡೆರ್ ಮ್ಯೂರ್ ಹಿಟ್ ವಿಕೆಟ್ ಬಿ ಗನಿ     7(23)
ನಿಕ್ ಫರ್ರಾರ್ ಸಿ ಹೂಡ ಬಿ ಕುಲ್ದೀಪ್     0(4)
ಕೈಲ್ ಸ್ಟಿರ್ಲಿಂಗ್ ಎಲ್ಬಿ ಕುಲ್ದೀಪ್     0(1)
ಅಲೆಕ್ಸ್ ಬೌಮಾ ಬಿ ಕುಲ್ದೀಪ್     5(5)
ಕ್ರಿಸ್ ಸೊಲೆ ಸಿ ಬೈನ್ಸ್ ಬಿ ಗನಿ     2(15)
ಗೆವಿನ್ ಮೈನ್ ಸಿ ಸ್ಯಾಮ್ಸನ್ ಬಿ ಗನಿ     16(22)
ಮಾರ್ಕ್ ವ್ಯಾಟ್ ಸಿ ಸರ್ಫರಾಜ್ ಬಿ ಕುಲ್ದೀಪ್     0(6)
ಗೋಸೈನ್ ಅಜೇಯ     1(6)
ಇತರೆ ಒಟ್ಟು     5
ವಿಕೆಟ್ ಪತನ: 1-13, 2-15, 3-54, 4-59, 5-59, 6-65, 7-70, 8-75, 9-82, 10-88
ಬೌಲಿಂಗ್ ವಿವರ
ಚಮ ಮಿಲಿಂದ್ 5-0-16-1
ಆವೇಶ್ ಖಾನ್ 5-0-14-1
ಕುಲ್ದೀಪ್ ಯಾದವ್ 10-1-28-4
ಅಮೀರ್ ಗನಿ 9.4-1-28-4
ಭಾರತ 22.3 ಓವರ್ಗಳಲ್ಲಿ 5 ವಿಕೆಟ್ಗೆ 92
ಅಂಕುಶ್ ಬೈನ್ಸ್ ಸಿ ಇಂಗ್ಲೀಷ್ ಬಿ ಗೊಸೈನ್     6(16)
ಹೆರ್ವಾಡ್ಕರ್ ಸಿ ಬೌಮಾ ಬಿ ಗೊಸೈನ್     0(3)
ವಿಜಯ್ ಸಿ ಉಮೀದ್ ಬಿ ಗೋಸೈನ್     4(8)
ಸಂಜು ಸ್ಯಾಮ್ಸನ್ ಎಲ್ಬಿ ಮೈನ್     7(17)
ರಿಕಿ ಭುಯಿ ಸಿ ಸ್ಟ್ರಿಲ್ಲಿಂಗ್ ಬಿ ಮೈನ್     0(1)
ಸರ್ಫರಾಜ್ ಖಾನ್ ಅಜೇಯ     45(51)
ದೀಪಕ್ ಹೂಡ ಅಜೇಯ     24(40)
ಇತರೆ (ಎಲ್ಬಿ 5, ನೋಬಾಲ್ 1) ಒಟ್ಟು     6
ವಿಕೆಟ್ ಪತನ: 1-1, 2-7, 3-19, 4-19, 5-22
ಬೌಲಿಂಗ್ ವಿವರ
ಗೊಸೈನ್ 10-1-31-3
ಗೆವಿನ್ ಮೈನ್ 7-0-20-2
ಮಾರ್ಕ್ ವ್ಯಾಟ್ 4.3-0-31-0
ಕ್ರಿಸ್ ಸೊಲೆ 1-0-5-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement