ಬಾಸ್ಕೆಟ್ಬಾಲ್: ಜೈನ್, ಕ್ರೈಸ್ಟ್ಗೆ ಜಯ
ಬೆಂಗಳೂರು: ಜೈನ್ ಯೂನಿವರ್ಸಿಟಿ ಆಯೋಜಿಸಿರುವ ಅಖಿಲ ಭಾರತ ಕ್ರೀಡೋತ್ಸವದ ಬಾಸ್ಕೆಟ್ಬಾಲ್ ಪಂದ್ಯದಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಹಾಗೂ ಜೈನ್ ಕಾಲೇಜು ತಂಡವು ಗೆಲವು ದಾಖಲಿಸಿದೆ.
ಸೋಮವಾರ ಜಯನಗರದ ಮಾಧವನ್ ಪಾರ್ಕ್ ಬಾಸ್ಕೆಟ್ಬಾಲ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಜೈನ್ ತಂಡವು 50-29 ಅಂಕಗಳ ಅಂತರದಲ್ಲಿ ಕ್ರಿಸ್ತ ಜಯಂತಿ ಕಾಲೇಜು ತಂಡದ ವಿರುದ್ಧ ಗೆಲವು ದಾಖಲಿಸಿದೆ.
ಮತ್ತೊಂದು ಪಂದ್ಯದಲ್ಲಿ ಕ್ರೈಸ್ಟ್ ತಂಡವು 39-23 ಅಂಕಗಳ ಅಂತರದಲ್ಲಿ ವಿದ್ಯಾನಿಕೇತನ ತಂಡದ ವಿರುದ್ಧ ಗೆಲವು ದಾಖಲಿಸಿದೆ.
ಇನ್ನು ಕ್ರಿಕೆಟ್ ಪಂದ್ಯಗಳಲ್ಲಿ ಚೆನ್ನೈನ ಎಸ್ಎನ್ಎನ್ ಎಂಜಿನಿಯರಿಂಗ್ ಕಾಲೇಜು ತಂಡವು ಬೆಂಗಳೂರಿನ ಸುರಾನಾ ಕಾಲೇಜು ತಂಡದ ವಿರುದ್ಧ 99 ರನ್ಗಳ ಗೆಲವು ದಾಖಲಿಸಿದೆ. ಇನ್ನು ಚೆನ್ನೈನ ಹಿಂದುಸ್ಥಾನ್ ಯುನಿವರ್ಸಿಟಿ ತಂಡವು ಪ್ರೆಸಿಡೆನ್ಸಿ ಕಾಲೇಜು ತಂಡದ ವಿರುದ್ಧ 3 ವಿಕೆಟ್ಗಳ ಗೆಲವು ದಾಖಲಿಸಿದೆ.
ಇನ್ನು ಅಂತಿಮ ಪಂದ್ಯದಲ್ಲಿ ಪಚಿಯಪ್ಪ ಕಾಲೇಜು ತಂಡವು ಮಂಗಳೂರಿನ ಆಳ್ವಾಸ್ ಕಾಲೇಜು ತಂಡದ ವಿರುದ್ಧ 2 ವಿಕೆಟ್ಗಳ ಸೋಲನುಭವಿಸಿದೆ.
ವಾಲಿಬಾಲ್ ಪಂದ್ಯದಲ್ಲಿ ಜೈನ್ ಯುನಿವರ್ಸಿಟಿಯು ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜು ತಂಡದ ವಿರುದ್ಧ 25-12, 25-19 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿತು. ಚೆನ್ನೈನ ವೆಲ್ಸ್ ತಂಡವು ಬೆಂಗಳೂರಿನ ಸುರಾನಾ ಕಾಲೇಜು ತಂಡದ ವಿರುದ್ಧ 25-16, 25-15 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿತು. ಇನ್ನು ಅಂತಿಮ ಪಂದ್ಯದಲ್ಲಿ ಚೆನ್ನೈನ ಡಿಬಿ ಜೈನ್ ಕಾಲೇಜು ತಂಡವು ಚೆನ್ನೈನ ಹಿಂದುಸ್ಥಾನ್ ಯುನಿವರ್ಸಿಟಿ ತಂಡದ ವಿರುದ್ಧ 25-18, 25-19 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದೆ.