ಸಿಮೊನಾಗೆ ಕತಾರ್ ಓಪನ್ ಪ್ರಶಸ್ತಿ
ಕತಾರ್: ಭರವಸೆಯ ಆಟಗಾರ್ತಿ ರೊಮೇನಿಯಾದ ಸಿಮೊನಾ ಹಾಲೆಪ್ ಅವರು ಕತಾರ್ ಓಪನ್ ಮಹಿಳೆಯರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿಮೊನಾ ಹಾಲೆಪ್, 6-2, 6-3 ನೇರ ಸೆಟ್ಗಳಿಂದ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರನ್ನು ನೇರ ಸೆಟ್ಗಳಲ್ಲಿ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ರೊಮೇನಿಯಾ ಆಟಗಾರ್ತಿ ಎರಡೂ ಸೆಟ್ಗಳಲ್ಲಿ ಅತ್ಮವಿಶ್ವಾಸದಿಂದ ಹೋರಾಟ ನಡೆಸುವ ಮೂಲಕ ರೋಚಕ ಗೆಲವು ದಾಖಲಿಸಿದರು.
ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯಗಳಲ್ಲಿ ಸಿಮೊನಾ 7-5, 6-2 ನೇರ ಸೆಟ್ಗಳಿಂದ ಆಗ್ನೆಸ್ಕಾ ರಾಡ್ವಾಂಸ್ಕಾ ಅವರನ್ನು ಹಾಗೂ ಕೆರ್ಬರ್ 6-1, 7-6 (8-6) ನೇರ ಸೆಟ್ಗಳಿಂದ ಸರ್ಬಿಯಾದ ಎಲೆನಾ ಯಾಂಕೊವಿಚ್ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಸುತ್ತು ತಲುಪಿದ್ದರು.