ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೆಸ್ಟ್ ನಾಯಕತ್ವದಿಂದ ಧೋನಿ ಕೆಳಗಿಳಿಯುವ ಸಮಯ

Rashmi Kasaragodu
Updated On : 20 Feb 2014, 1:38 am

ನವದೆಹಲಿ: ಭಾರತ ತಂಡ ಸತತವಾಗಿ ವಿದೇಶಿ ನೆಲದಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಸ್ಥಾನದಿಂದ ಕೆಳಗಿಳಿಯಲು ಇದು ಉತ್ತಮ ಸಮಯ ಎಂದು ಭಾರತ ತಂಡದ ಮಾಜಿ ಆಟಗಾರ ಮೋಹಿಂದರ್ ಅಮರ್‌ನಾಥ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಪಂದ್ಯದ ವೇಳೆ ರಕ್ಷಣಾತ್ಮಕ ಆಟಕ್ಕೆ ಮುಂದಾಗುವುದು ಎದುರಾಳಿ ತಂಡ ಪಂದ್ಯದಲ್ಲಿ ನಿಯಂತ್ರಣ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. ಇತರೆ ನಾಯಕರಂತೆ ಧೋನಿ ತವರಿನ ಅಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಅದರಲ್ಲಿ ಯಾವುದೇ ವಿಶೇಷತೆಗಳಿಲ್ಲ. ತಂಡಕ್ಕೆ ಮನ್ಸೂರ್ ಅಲಿ ಖಾನ್ ಪಟೌಡಿಯಂತಹ ಆಕ್ರಮಣಕಾರಿ ನಾಯಕನ ಅವಶ್ಯಕತೆ ಇದೆ ಎಂದು ಅಮರ್‌ನಾಥ್ ತಿಳಿಸಿದ್ದಾರೆ.
ಭಾರತ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಪ್ರವಾಸದಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಾ ಬಂದಿದೆ. ನಾಯಕನಾದವನು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕು.
ವಿಶ್ವದ ಯಾವುದೇ ಟೆಸ್ಟ್ ತಂಡದ ನಾಯಕ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ. ನನ್ನ ಪ್ರಕಾರ ಧೋನಿಯನ್ನು ಟೆಸ್ಟ್ ತಂಡದ ನಾಯಕತ್ವದಿಂದ ಮುಕ್ತರನ್ನಾಗಿಸಲು ಇದು ಉತ್ತಮ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವನ್ನು ಮುನ್ನಡೆಸಲು ಗೌತಮ್ ಗಂಭೀರ್ ಉತ್ತಮ ಅವಕಾಶವಾಗಿದ್ದರು. ಆದರೆ ಆತ ತಂಡದಲ್ಲಿಲ್ಲ. ಹಾಗಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲು ಉತ್ತಮ ಆಯ್ಕೆಯಾಗಲಿದ್ದಾರೆ. ಆತ ವಿವಿಧ ಹಂತಗಳಲ್ಲಿ ನಾಯಕತ್ವದ ಗುಣಗಳನ್ನು ತೋರಿದ್ದಾರೆ. ಅಲ್ಲದೆ ಬೇರೆ ಬೇರೆ ಮಾದರಿಗಳಿಗೆ ವಿವಿಧ ನಾಯಕರನ್ನು ಆಯ್ಕೆ ಮಾಡಬೇಕು.
ತಂಡ ಉತ್ತಮ ಪ್ರದರ್ಶನ ನೀಡುತಿಲ್ಲದಿದ್ದರೂ, ಡಂಕನ್ ಫ್ಲೆಚರ್ ಅವರನ್ನು ಇನ್ನು ಏಕೆ ಮುಂದುವರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಎಲ್ಲರೂ ಆಟಗಾರರು ಹಾಗೂ ನಾಯಕನ ಬಗ್ಗೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಬಗ್ಗೆ ಯಾರೂ ಪ್ರಶ್ನೆ ಎತ್ತುತ್ತಿಲ್ಲ. ಅಲ್ಲದೆ ಭಾರತ ತಂಡಕ್ಕೆ ಭಾರತೀಯ ಕೋಚ್ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement